ADVERTISEMENT

ಕ್ರೀಡಾಪಟುಗಳ ನಡುವೆ ತಾರತಮ್ಯವೇಕೆ?

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 19:30 IST
Last Updated 2 ಸೆಪ್ಟೆಂಬರ್ 2021, 19:30 IST

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಮತ್ತು ಇತರ ಕ್ರೀಡಾಪಟುಗಳು ಬೆಳ್ಳಿ, ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಾಗ ದೇಶದಾದ್ಯಂತ ಸಂಭ್ರಮ ವ್ಯಕ್ತವಾಯಿತು, ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಯ ಮಹಾಪೂರವೇ ಹರಿದುಬಂತು. ಆದರೆ, ಅದೇ ಪ್ಯಾರಾ ಒಲಿಂಪಿಕ್ಸ್‌ನ ಜಾವಲಿನ್‌ ಎಸೆತದಲ್ಲಿ ಸುಮಿತ್ ಅಂಟಿಲ್ ಹಾಗೂ ಏರ್ ರೈಫಲ್‌ನಲ್ಲಿ ಅವನಿ ಲೇಖರ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಾಗ ಸಾಮಾಜಿಕ ಜಾಲತಾಣಗಳಲ್ಲಿ ಮೊದಲಿನ ಸಂಭ್ರಮ ಕಂಡುಬರಲಿಲ್ಲ, ಶುಭಾಶಯಗಳ ಮಹಾಪೂರವೂ ಹರಿದುಬರಲಿಲ್ಲ. ಇನ್ನಾದರೂ ನಮ್ಮ ಮನಃಸ್ಥಿತಿಯನ್ನು ಬದಲಿಸಿಕೊಂಡು, ಎಲ್ಲರನ್ನೂ ಸಮಾನವಾಗಿ ಕಾಣೋಣ. ಆಗ ಮಾತ್ರ ಅಂಗವಿಕಲ ಕ್ರೀಡಾಪಟುಗಳಿಗೆ ಚೈತನ್ಯ ತುಂಬಲು ಸಾಧ್ಯ.

–ನಿಂಗಪ್ಪ ಮಾಳಶೆಟ್ಟಿ, ಹೊಸಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT