ADVERTISEMENT

ಕನ್ನಡ ಅಧ್ಯಯನ: ಕೋ.ಚೆನ್ನಬಸಪ್ಪ ಹೆಸರಲ್ಲಿ ಕೊಡುಗೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 19:40 IST
Last Updated 25 ಮೇ 2018, 19:40 IST
ನಲ್ಲೂರಹಳ್ಳಿಯ ಉದ್ಯಮಿ ಕಿರಣ್ ಕುಮಾರ್ ರೆಡ್ಡಿ ಮನೆಗೆ ಬಂದಿದ್ದ ನಟ ಸುಮನ್‌ ಅವರನ್ನು ಕುಟುಂಬ ಸದಸ್ಯರು ಹೂಗುಚ್ಚ ನೀಡಿ ಸ್ವಾಗತಿಸಿದರು
ನಲ್ಲೂರಹಳ್ಳಿಯ ಉದ್ಯಮಿ ಕಿರಣ್ ಕುಮಾರ್ ರೆಡ್ಡಿ ಮನೆಗೆ ಬಂದಿದ್ದ ನಟ ಸುಮನ್‌ ಅವರನ್ನು ಕುಟುಂಬ ಸದಸ್ಯರು ಹೂಗುಚ್ಚ ನೀಡಿ ಸ್ವಾಗತಿಸಿದರು   

ಬೆಂಗಳೂರು: ಕನ್ನಡ ಭಾಷೆ ಅಧ್ಯಯನಕ್ಕೆ ಪ್ರೋತ್ಸಾಹ ನೀಡಲು ಟೆಕ್ಸಾಸ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಪ್ರಭುದೇವ ಕೋಣನ ಅವರು ತಮ್ಮ ತಂದೆ ಕೋ. ಚೆನ್ನಬಸಪ್ಪ ಅವರ ಗೌರವಾರ್ಥ ದಕ್ಷಿಣ ಏಷ್ಯಾ ಸಂಸ್ಥೆಗೆ ಕೊಡುಗೆ ನೀಡಿದ್ದಾರೆ.

ಸಂಸ್ಥೆಯಲ್ಲಿ ದತ್ತಿ ನಿಧಿಗೆ ಸ್ಥಾಪನೆಗೆ ಕನಿಷ್ಟ 2,50,000 ಡಾಲರ್‌ ಬೇಕಾಗುತ್ತದೆ. ಪ್ರಭುದೇವ ಅವರು ನೀಡಿರುವ ಕೊಡುಗೆ ಕನ್ನಡ ಕಾರ್ಯಕ್ರಮಗಳನ್ನು ಆರಂಭಿಸಲು ಪ್ರೇರಣೆ ನೀಡಿದೆ. ಕನ್ನಡ ಭಾಷೆ ಬೋಧನೆ ಮತ್ತು ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು
ಆಸ್ಟಿನ್‌ನಲ್ಲಿರುವ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT