ADVERTISEMENT

ಪಂಜಾಬ್ ಕಿಂಗ್ಸ್–ರಾಜಸ್ಥಾನ್ ರಾಯಲ್ಸ್‌ ಪಂದ್ಯ; ಸಂಜು ಸ್ಯಾಮ್ಸನ್‌ ಮೇಲೆ ಒತ್ತಡ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 16:26 IST
Last Updated 20 ಸೆಪ್ಟೆಂಬರ್ 2021, 16:26 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ದುಬೈ (ಪಿಟಿಐ): ಕನ್ನಡನಾಡಿನ ಕ್ರಿಕೆಟ್‌ ತಾರೆಗಳ ತಂಡ ಪಂಜಾಬ್ ಕಿಂಗ್ಸ್ ಮಂಗಳವಾರ ರಾಜಸ್ಥಾನ್ ರಾಯಲ್ಸ್ ತಂಡದ ಸವಾಲು ಎದುರಿಸಲಿದೆ.

ಎರಡೂ ತಂಡಗಳಲ್ಲಿ ಸಿಡಿಲಬ್ಬರದ ಬ್ಯಾಟ್ಸ್‌ಮನ್‌ಗಳು ಇರುವುದರಿಂದ ರನ್‌ಗಳ ಹೊಳೆ ಹರಿಯುವ ನಿರೀಕ್ಷೆ ಮೂಡಿದೆ.

ಕಿಂಗ್ಸ್‌ನಲ್ಲಿ ಕ್ರಿಸ್ ಗೇಲ್, ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್ ಟೂರ್ನಿಯ ಮೊದಲ ಹಂತದಲ್ಲಿ ಅಮೋಘ ಲಯದಲ್ಲಿದ್ದರು. ರನ್‌ಗಳನ್ನು ಪೇರಿಸಿದ್ದರು. ರಾಯಲ್ಸ್‌ ತಂಡದಲ್ಲಿರುವ ಲಿಯಾಮ್ ಲಿವಿಂಗ್‌ಸ್ಟೋನ್, ಎವಿನ್ ಲೂಯಿಸ್ ಕೂಡ ಬಲಾಢ್ಯ ಬ್ಯಾಟ್ಸ್‌ಮನ್‌ಗಳೇ ಆಗಿದ್ದಾರೆ.

ADVERTISEMENT

ರಾಹುಲ್ ನಾಯಕತ್ವದ ಪಂಜಾಬ್ ತಂಡ ಮತ್ತು ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ ಐದು ಹಾಗೂ ಆರನೇ ಸ್ಥಾನದಲ್ಲಿವೆ. ಉಭಯ ತಂಡಗಳೂ ತಲಾ ಆರು ಅಂಕ ಗಳಿಸಿವೆ. ಈ ಹಂತದಲ್ಲಿ ಉತ್ತಮ ರನ್‌ ಸರಾಸರಿಯೊಂದಿಗೆ ಹೆಚ್ಚು ಪಂದ್ಯಗಳನ್ನು ಜಯಿಸುವ ಒತ್ತಡ ಎರಡೂ ತಂಡಗಳಿಗೂ ಇದೆ.

ಪಂಜಾಬ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ತಮ್ಮ ತಂಡದ ಯುವ ಪ್ರತಿಭೆಗಳು ಮತ್ತು ಅನುಭವಿ ಆಟಗಾರರನ್ನು ಸಮರ್ಥವಾಗಿ ದುಡಿಸಿಕೊಳ್ಳುವತ್ತ ಯೋಜನೆ ರೂಪಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ಹೆಚ್ಚು ಯೋಚನೆಯಿಲ್ಲ. ಆದರೆ ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿಯೊಂದಿಗೆ ಉತ್ತಮ ಜೊತೆ ನೀಡುವಲ್ಲಿ ಉಳಿದ ಮಧ್ಯಮವೇಗಿಗಳು ಯಶಸ್ವಿಯಾದರೆ ತಂಡದ ಜಯಕ್ಕೆ ಹೆಚ್ಚು ಅವಕಾಶ ಇದೆ.

ರಾಯಲ್ಸ್ ತಂಡದಲ್ಲಿ ಆಲ್‌ರೌಂಡರ್ ಕ್ರಿಸ್ ಮೊರಿಸ್, ಡೆವಿಡ್ ಮಿಲ್ಲರ್ ಅವರಿಂದ ನಿರೀಕ್ಷಿತ ಆಟ ಮೂಡಿಬಂದರೆ ಹೆಚ್ಚು ಬಲ ಬರುತ್ತದೆ. ನಾಯಕ ಸಂಜು ತಮ್ಮ ಲಯಕ್ಕೆ ಮರಳುವ ಸವಾಲು ಇದೆ. ಯುವ ಬೌಲರ್ ಚೇತನ್ ಸಕಾರಿಯಾ, ಅನುಭವಿ ಜಯದೇವ್ ಉನದ್ಕತ್, ಕನ್ನಡಿಗ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಮೇಲೆಯೇ ಹೆಚ್ಚು ಹೊಣೆ ಬೀಳುವುದು ಖಚಿತ.

ಪಂಜಾಬ್ ತಂಡದ ಆರಂಭಿಕ ಜೋಡಿ ರಾಹುಲ್ ಮತ್ತು ಮಯಂಕ್ ಅಗರವಾಲ್ ಅವರನ್ನು ನಿಯಂತ್ರಿಸುವುದು ರಾಜಸ್ಥಾನ್ ಬೌಲರ್‌ಗಳ ಮುಂದಿರುವ ಪ್ರಮುಖ ಹಾಗೂ ಕಠಿಣ ಸವಾಲು.

ತಂಡಗಳು

ಪಂಜಾಬ್ ಕಿಂಗ್ಸ್: ಕೆ.ಎಲ್. ರಾಹುಲ್ (ನಾಯಕ), ಮಯಂಕ್ ಅಗರವಾಲ್, ಆರ್ಷದೀಪ್ ಸಿಂಗ್, ಇಶಾನ್ ಪೊರೆಲ್, ಶಾರೂಖ್ ಖಾನ್, ಮೊಹಮ್ಮದ್ ಶಮಿ, ನೇಥನ್ ಎಲ್ಲಿಸ್, ಆದಿಲ್ ರಶೀದ್, ಮುರುಗನ್ ಅಶ್ವಿನ್, ಹರಪ್ರೀತ್ ಬ್ರಾರ್, ಮೊಯಸೆಸ್ ಹೆನ್ರಿಕ್ಸ್, ಕ್ರಿಸ್ ಜೋರ್ಡಾನ್, ಏಡನ್ ಮಾರ್ಕರಮ್, ಮನದೀಪ್ ಸಿಂಗ್, ದರ್ಶನ್ ನಾಲ್ಕಂಡೆ, ಪ್ರಭಸಿಮ್ರನ್ ಸಿಂಗ್, ರವಿ ಬಿಷ್ಣೋಯಿ, ಉತ್ಕರ್ಷ್‌ ಸಿಂಗ್, ಫ್ಯಾಬಿಯನ್ ಅಲೆನ್, ಸೌರಭ್ ಕುಮಾರ್, ಜಲಜ್ ಸಕ್ಸೆನಾ.

ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಎವಿನ್ ಲೂಯಿಸ್, ಡೇವಿಡ್ ಮಿಲ್ಲರ್, ಕ್ರಿಸ್ ಮೊರಿಸ್, ಒಶಾನ್ ಥಾಮಸ್, ಮುಸ್ತಫಿಜುರ್ ರೆಹಮಾನ್, ಶ್ರೇಯಸ್ ಗೋಪಾಲ್, ತಬ್ರೇಜ್ ಶಮ್ಸಿ, ಗ್ಲೆನ್ ಫಿಲಿಪ್ಸ್, ಚೇತನ್ ಸಕಾರಿಯಾ, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಆಕಾಶ್ ಸಿಂಗ್, ಅನುಜ್ ರಾವತ್, ಕೆ.ಸಿ. ಕಾರ್ಯಪ್ಪ, ಯಶಸ್ವಿ ಜೈಸ್ವಾಲ್, ಶಿವಂ ದುಬೆ, ಜಯದೇವ್ ಉನದ್ಕತ್, ಮಯಂಕ್ ಮಾರ್ಕಂಡೆ, ಕಾರ್ತಿಕ್ ತ್ಯಾಗಿ, ಕುಲದೀಪ್‌ ಯಾದವ್.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್.

--

ಬಲಾಬಲ

ಪಂದ್ಯ;22

ರಾಜಸ್ಥಾನ್ ಜಯ; 12

ಪಂಜಾಬ್ ಜಯ; 10

––

ಹೆಚ್ಚು ರನ್ ಗಳಿಸಿದವರು

ಕೆ.ಎಲ್. ರಾಹುಲ್;

(ಪಂಜಾಬ್)

ರನ್: 331

ಪಂದ್ಯ; 7

––

ಸಂಜು ಸ್ಯಾಮ್ಸನ್

(ರಾಜಸ್ಥಾನ್)

ಪಂದ್ಯ; 7

ರನ್; 277

––

ಹೆಚ್ಚು ವಿಕೆಟ್

ಮೊಹಮ್ಮದ್ ಶಮಿ (ಪಂಜಾಬ್)

ಪಂದ್ಯ; 8

ವಿಕೆಟ್; 8

ಮುಸ್ತಫಿಜುರ್ ರೆಹಮಾನ್ (ರಾಜಸ್ಥಾನ್)

ಪಂದ್ಯ; 7

ವಿಕೆಟ್; 8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.