ADVERTISEMENT

ಮಿಲ್ಖಾ ಸಿಂಗ್ ಸ್ಮರಣೆ: ತೋಳಿಗೆ ಕಪ್ಪುಪ‍ಟ್ಟಿ ಧರಿಸಿ ಕಣಕ್ಕಿಳಿದ ಭಾರತದ ಆಟಗಾರರು

ಪಿಟಿಐ
Published 19 ಜೂನ್ 2021, 11:32 IST
Last Updated 19 ಜೂನ್ 2021, 11:32 IST
ತೋಳಿಗೆ ಕಪ್ಪುಪಟ್ಟಿ ಧರಿಸಿದ್ದ ಭಾರತ ತಂಡದ ಆಟಗಾರ ಶುಭಮನ್ ಗಿಲ್‌ (ಎಡ)– ಎಎಫ್‌ಪಿ ಚಿತ್ರ
ತೋಳಿಗೆ ಕಪ್ಪುಪಟ್ಟಿ ಧರಿಸಿದ್ದ ಭಾರತ ತಂಡದ ಆಟಗಾರ ಶುಭಮನ್ ಗಿಲ್‌ (ಎಡ)– ಎಎಫ್‌ಪಿ ಚಿತ್ರ   

ಸೌತಾಂಪ್ಟನ್‌: ಕೋವಿಡ್‌ನಿಂದಾಗಿ ಮೃತಪಟ್ಟದಿಗ್ಗಜ ಅಥ್ಲೀಟ್‌ ಮಿಲ್ಖಾ ಸಿಂಗ್ ಅವರ ಸ್ಮರಣಾರ್ಥ ಭಾರತ ಕ್ರಿಕೆಟ್ ತಂಡದ ಆಟಗಾರರು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ತೋಳಿಗೆ ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದರು.

‘ಫ್ಲೈಯಿಂಗ್ ಸಿಖ್‌‘ ಖ್ಯಾತಿಯ ಮಿಲ್ಖಾ ಸಿಂಗ್‌ (91) ಶುಕ್ರವಾರ ಕೊನೆಯುಸಿರೆಳೆದಿದ್ದರು. ಭಾರತ ತಂಡದ ಆಟಗಾರರು ನ್ಯೂಜಿಲೆಂಡ್ ಎದುರು ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರ ಕಪ್ಪುಪಟ್ಟಿ ಧರಿಸಿ ಆಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದರು.

ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಭಾರತದ ಪ್ರಮುಖ ಆಟಗಾರರು ಮತ್ತು ಕೋಚ್ ರವಿ ಶಾಸ್ತ್ರಿ ಈಗಾಗಲೇ ಮಿಲ್ಖಾ ಸಿಂಗ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ADVERTISEMENT

ಒಲಿಂಪಿಯನ್‌ ಕ್ರೀಡಾಪಟುವೊಬ್ಬರಿಗೆ ಭಾರತ ಕ್ರಿಕೆಟ್ ತಂಡವು ಕಪ್ಪುಪಟ್ಟಿ ಧರಿಸಿ ಗೌರವ ಸೂಚಿಸಿರುವುದು ಅಪರೂಪದ ಸಂದರ್ಭಗಳಲ್ಲಿ ಒಂದಾಗಿದೆ.

‘ಕೋವಿಡ್‌ನಿಂದಾಗಿ ಮೃತಪಟ್ಟಿರುವಮಿಲ್ಖಾ ಸಿಂಗ್‌ಜೀ ಅವರ ಸ್ಮರಣೆಗಾಗಿ ಭಾರತ ಕ್ರಿಕೆಟ್ ತಂಡದ ಆಟಗಾರರು ಕಪ್ಪುಪಟ್ಟಿ ಧರಿಸಿದ್ದಾರೆ‘ ಎಂದು ಬಿಸಿಸಿಐ ಮೀಡಿಯಾ ಸೆಲ್ ಪೋಸ್ಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.