ADVERTISEMENT

IPL 2021 | DC vs SRH: ಬದಲಾಗದ ಹೈದರಾಬಾದ್ ಅದೃಷ್ಟ; ಡೆಲ್ಲಿಗೆ 8 ವಿಕೆಟ್ ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎಂಟು ವಿಕೆಟ್ ಅಂತರದ ಅಧಿಕಾರಯುತ ಗೆಲುವು ದಾಖಲಿಸಿದೆ. 135 ರನ್‌ಗಳ ಸುಲಭ ಗುರಿಯನ್ನು ಇನ್ನು 13 ಎಸೆತಗಳು ಬಾಕಿ ಉಳಿದಿರುವಾಗ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿದೆ.

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 17:54 IST
Last Updated 22 ಸೆಪ್ಟೆಂಬರ್ 2021, 17:54 IST

ಡೆಲ್ಲಿ ವಿಜಯೋತ್ಸವ

ಚೆನ್ನೈ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಡೆಲ್ಲಿ

ಡೆಲ್ಲಿಗೆ ಸುಲಭ ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎಂಟು ವಿಕೆಟ್ ಅಂತರದ ಸುಲಭ ಗೆಲುವು ದಾಖಲಿಸಿದೆ. 

ಮೊದಲು ಬೌಲರ್‌ಗಳು ಮಿಂಚಿನ ದಾಳಿಗೆ ಸಿಲುಕಿದ ಹೈದರಾಬಾದ್ ಒಂಬತ್ತು ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಬಳಿಕ ಶಿಖರ್ ಧವನ್ (42), ಶ್ರೇಯಸ್ ಅಯ್ಯರ್ (47*) ಹಾಗೂ ನಾಯಕ ರಿಷಭ್ ಪಂತ್ (35*) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 17.5 ಓವರ್‌ಗಳಲ್ಲಿಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 

ADVERTISEMENT

ಬೌಂಡರಿ, ಸಿಕ್ಸರ್ ಚಚ್ಚಿದ ಪಂತ್

17ನೇ ಓವರ್‌ನಲ್ಲಿ 16 ರನ್ ಸೊರೆಗೈದ ರಿಷಭ್ ಪಂತ್, ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅಲ್ಲದೆ ಅಯ್ಯರ್ ಜೊತೆಗೂ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. 
 

ಕ್ರೀಸಿನಲ್ಲಿದ್ದಾರೆ ಅಯ್ಯರ್, ಪಂತ್

ಧವನ್ ವಿಕೆಟ್ ಪತನದ ಬಳಿಕ ತಂಡಕ್ಕೆ ಶ್ರೇಯಸ್ ಅಯ್ಯರ್ ಆಸರೆಯಾದರು. 15 ಓವರ್ ಅಂತ್ಯಕ್ಕೆ ಡೆಲ್ಲಿ ಎರಡು ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿತ್ತು. ಅಲ್ಲದೆ ಅಂತಿಮ 5 ಓವರ್‌ಗಳಲ್ಲಿ ಗೆಲುವಿಗೆ 36 ರನ್ ಬೇಕಿದೆ. 

ಧವನ್ ಹೊರದಬ್ಬಿದ ರಶೀದ್ ಖಾನ್

ಧವನ್-ಅಯ್ಯರ್ ಫಿಫ್ಟಿ ಜೊತೆಯಾಟ

ಧವನ್, ಅಯ್ಯರ್ ಸಮಯೋಚಿತ ಆಟ

10 ಓವರ್‌ಗಳ ಅಂತ್ಯಕ್ಕೆ ಡೆಲ್ಲಿ ಒಂದು ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿದೆ. ಅಂತಿಮ 60 ಎಸೆತಗಳಲ್ಲಿ ತಂಡದ ಗೆಲುವಿಗೆ 66 ರನ್‌ಗಳ ಅಗತ್ಯವಿದೆ. 

ಕೇನ್ ವಿಲಿಯಮ್ಸನ್ ಅಮೋಘ ಕ್ಯಾಚ್

ಪವರ್ ಪ್ಲೇ ಅಂತ್ಯಕ್ಕೆ 39/1

135 ರನ್ ಗೆಲುವಿನ ಗುರಿ ಬೆನ್ನತ್ತಿದ ಡೆಲ್ಲಿ ನಿಧಾನಗತಿಯ ಆರಂಭವನ್ನು ಪಡೆದಿದೆ. ಖಲೀಲ್ ಅಹ್ಮದ್ ದಾಳಿಯಲ್ಲಿ ಪೃಥ್ವಿ ಶಾ (11) ಔಟಾದರು. ಪವರ್ ಪ್ಲೇ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿದೆ. 

ಕೇನ್ ವಿಲಿಯಮ್ಸನ್ ಅದ್ಭುತ ಕ್ಯಾಚ್, ಪೃಥ್ವಿ ಶಾ ಔಟ್

ಡೆಲ್ಲಿಗೆ 135 ರನ್‌ಗಳ ಸುಲಭ ಗುರಿ ನೀಡಿದ ಹೈದರಾಬಾದ್

ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್‌ಗಳ ನಿಖರ ದಾಳಿಗೆ ಸಿಲುಕಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲಷ್ಟೇ ಶಕ್ತವಾಗಿದೆ. 

ಹೈದರಾಬಾದ್‌ನ ಯಾವ ಬ್ಯಾಟ್ಸ್‌ಮನ್ ಹೋರಾಟದ ಮನೋಭಾವವನ್ನು ತೋರಲೇ ಇಲ್ಲ. ಕೆಳ ಕ್ರಮಾಂಕದಲ್ಲಿ ಅಬ್ದುಲ್ ಸಮದ್ (28) ಹಾಗೂ ರಶೀದ್ ಖಾನ್ (22) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಡೇವಿಡ್ ವಾರ್ನರ್ (0), ನಾಯಕ ಕೇನ್ ವಿಲಿಯಮ್ಸನ್ (18), ಮನೀಶ್ ಪಾಂಡೆ (17), ವೃದ್ಧಿಮಾನ್ ಸಹಾ (18), ಕೇದಾರ್ ಜಾಧವ್ (3) ನಿರಾಸೆ ಮೂಡಿಸಿದರು. 

ಡೆಲ್ಲಿ ಪರ ಕಗಿಸೊ ರಬಾಡ ಮೂರು, ಎನ್ರಿಚ್ ನಾಕಿಯಾ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. 

ಡೆಲ್ಲಿ ಬೌಲರ್‌ಗಳ ಮಿಂಚು

ಡೆಲ್ಲಿ ಬೌಲರ್‌ಗಳ ಸಂಭ್ರಮ

ವಿಲಿಯಮ್ಸನ್, ಮನೀಶ್ ನಿರ್ಗಮನ

ನಾಯಕ ಕೇನ್ ವಿಲಿಯಮ್ಸನ್ (18) ಅವರನ್ನು ಸ್ಪಿನ್ನರ್ ಅಕ್ಷರ್ ಪಟೇಲ್ ಬಲೆಗೆ ಬೀಳಿಸಿದರು. ಇದಾದ ಬೆನ್ನಲ್ಲೇ ಮನೀಶ್ ಪಾಂಡೆ (17) ವಿಕೆಟ್ ನಷ್ಟವಾಯಿತು. ಇದರೊಂದಿಗೆ 61 ರನ್ನಿಗೆ ನಾಲ್ಕನೇ ವಿಕೆಟ್ ಪತನವಾಯಿತು.

ಸಹಾ ವಿಕೆಟ್ ಪತನ

ಉತ್ತಮವಾಗಿ ಆಡುತ್ತಿದ್ದ ವೃದ್ಧಿಮಾನ್ ಸಹಾ (18) ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಪವರ್ ಪ್ಲೇ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 32 ರನ್ ಗಳಿಸಿತ್ತು. 

ಡೇವಿಡ್ ವಾರ್ನರ್ ಶೂನ್ಯಕ್ಕೆ ಔಟ್

ಎನ್ರಿಚ್ ನಾಕಿಯಾ ಪ್ರಥಮ ಓವರ್‌ನಲ್ಲೇ ವಿಕೆಟ್ ಒಪ್ಪಿಸಿರುವ ಡೇವಿಡ್ ವಾರ್ನರ್ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದ್ದಾರೆ. 
 

ಆಡುವ ಬಳಗ ಇಂತಿದೆ:

ಟಾಸ್ ಝಲಕ್

ಇತ್ತಂಡಗಳ ಸಿದ್ಧತೆ

ಟಾಸ್ ಗೆದ್ದ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಆಯ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. 

ಡೆಲ್ಲಿ ತಂಡಕ್ಕೆ ಶ್ರೇಯಸ್ ಬಲ, ಹೈದರಾಬಾದ್‌ಗೆ ಮನೀಶ್ ಬಲ

ಡೆಲ್ಲಿಗೆ ಅಗ್ರಸ್ಥಾನಕ್ಕೇರುವ ಗುರಿ

ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸನ್‌ರೈಸರ್ಸ್

ಪಂತ್‌ಗೆ ಕೋಚ್ ರಿಕಿ ಪಾಂಟಿಂಗ್ ಸಲಹೆ

ಕೇನ್ ವಿಲಿಯಮ್ಸನ್ ತಯಾರಿ

ರಿಷಭ್ ಪಂತ್ vs ಕೇನ್ ವಿಲಿಯಮ್ಸನ್

ತಂಡಗಳ ಬಲಾಬಲ ಇಂತಿದೆ

ತಂಗರಸು ನಟರಾಜನ್‌ಗೆ ಕೋವಿಡ್ ಸೋಂಕು ದೃಢ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.