ADVERTISEMENT

IPL 2021 | RCB vs KKR: ಆರ್‌ಸಿಬಿ ತತ್ತರ; ಕೆಕೆಆರ್‌ಗೆ 9 ವಿಕೆಟ್ ಅಂತರದ ಭರ್ಜರಿ ಗೆಲುವು

2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಅಬುಧಾಬಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯ ಸೋಲಿನ ಮುಖಭಂಗಕ್ಕೊಳಗಾಗಿದೆ. ಆರ್‌ಸಿಬಿ ಒಡ್ಡಿದ 93 ಗುರಿ ಬೆನ್ನಟ್ಟಿದ ಕೆಕೆಆರ್ ಕೇವಲ 10 ಓವರ್‌ಗಳಲ್ಲೇ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 17:32 IST
Last Updated 20 ಸೆಪ್ಟೆಂಬರ್ 2021, 17:32 IST

ಈ ಸೋಲಿನ ಹೊರತಾಗಿಯೂ ಮೂರನೇ ಸ್ಥಾನ ಕಾಯ್ದುಕೊಂಡ ಆರ್‌ಸಿಬಿ

ಈ ಸೋಲಿನ ಹೊರತಾಗಿಯೂ ಎಂಟು ಪಂದ್ಯಗಳಲ್ಲಿ 10 ಅಂಕಗಳನ್ನು ಸಂಪಾದಿಸಿರುವ ಆರ್‌ಸಿಬಿ, ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ಅತ್ತ ಅಷ್ಟೇ ಪಂದ್ಯಗಳನ್ನು ಆಡಿರುವ ಕೆಕೆಆರ್ ಆರು ಅಂಕಗಳೊಂದಿಗೆ ಐದನೇ ಸ್ಥಾನಕ್ಕೇರಿದೆ. 

ವರುಣ್ ಚಕ್ರವರ್ತಿ ಪಂದ್ಯಶ್ರೇಷ್ಠ

ಚಿತ್ರಗಳಲ್ಲಿ ನೋಡಿ...

ಆರ್‌ಸಿಬಿ vs ಕೆಕೆಆರ್ ಪಂದ್ಯದ ಸಂಪೂರ್ಣ ವಿವರ ಇಲ್ಲಿದೆ

10 ಓವರ್‌ಗಳಲ್ಲೇ ಗೆಲುವು ದಾಖಲಿಸಿದ ಕೆಕೆಆರ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಅಬುಧಾಬಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು 9 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಕೆಕೆಆರ್ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಆರ್‌ಸಿಬಿ ಕೇವಲ 92 ರನ್ನಿಗೆ ಆಲೌಟ್ ಆಗಿತ್ತು. ಬಳಿಕ ಗುರಿ ಬೆನ್ನಟ್ಟಿದ ಕೋಲ್ಕತ್ತ, 10 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 

ಕೆಕೆಆರ್ ಪರ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಶುಭಮನ್ ಗಿಲ್ (48) ಹಾಗೂ ಚೊಚ್ಚಲ ಪಂದ್ಯವನ್ನಾಡುತ್ತಿರುವ ವೆಂಕಟೇಶ್ ಅಯ್ಯರ್ (41*) ಗಮನ ಸೆಳೆದರು. 

ಪವರ್ ಪ್ಲೇಯಲ್ಲಿ 56 ರನ್ ಪೇರಿಸಿದ ಕೆೆಕೆಆರ್

ರಸೆಲ್, ಚಕ್ರವರ್ತಿಗೆ ತಲಾ ಮೂರು ವಿಕೆಟ್

ಕೋಲ್ಕತ್ತ ನೈಟ್ ರೈಡರ್ಸ್ ಬೌಲರ್‌ಗಳ ನಿಖರ ದಾಳಿಗೆ ಸಿಲುಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 19 ಓವರ್‌ಗಳಲ್ಲಿ ಕೇವಲ ರನ್ನಿಗೆ 92 ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಈ ಮೂಲಕ ಎದುರಾಳಿ ತಂಡಕ್ಕೆ 93 ರನ್‌ಗಳ ಸುಲಭ ಗೆಲುವಿನ ಗುರಿಯನ್ನು ಒಡ್ಡಿದೆ. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಆರಂಭ ಉತ್ತಮವಾಗಿರಲಿಲ್ಲ. ಆರ್‌ಸಿಬಿ ಪರ ದಾಖಲೆಯ 200ನೇ ಪಂದ್ಯ ಆಡುತ್ತಿರುವ ನಾಯಕ ವಿರಾಟ್ ಕೊಹ್ಲಿ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. 

ದೇವದತ್ತ ಪಡಿಕ್ಕಲ್ (22), ಚೊಚ್ಚಲ ಪಂದ್ಯ ಆಡುತ್ತಿರುವ ಕೆ.ಎಸ್. ಭರತ್ (16) ಸಹ ಹೆಚ್ಚು ಹೊತ್ತು ನಿಲ್ಲನಿಲ್ಲ. ಇದಾದ ಬೆನ್ನಲ್ಲೇ ಆ್ಯಂಡ್ರೆ ರಸೆಲ್ ದಾಳಿಗೆ ಕ್ಲೀನ್ ಬೌಲ್ಡ್ ಆದ ಎಬಿ ಡಿವಿಲಿಯರ್ಸ್ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು. 

10 ಓವರ್‌ಗಳ ಅಂತ್ಯಕ್ಕೆ 54 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 

ಇದಾದ ಬಳಿಕವು ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ (10) ಹಾಗೂ ವನಿಂದು ಹಸರಂಗಾ (0) ಹೊರದಬ್ಬಿದ ವರುಣ್ ಚಕ್ರವರ್ತಿ ಡಬಲ್ ಆಘಾತ ನೀಡಿದರು. ಇದರೊಂದಿಗೆ 63 ರನ್ನಿಗೆ ಆರು ವಿಕೆಟ್ ಕಳೆದುಕೊಂಡಿತು. ಈ ಪೈಕಿ ಐಪಿಎಲ್‌ಗೆ ಪದಾರ್ಪಣೆ ಮಾಡಿರುವ ಹಸರಂಗಾ ಮೊದಲ ಎಸೆತದಲ್ಲೇ ಔಟಾದರು. 

ಸಚಿನ್ ಬೇಬಿ (7) ಕೂಡ ಚಕ್ರವರ್ತಿ ಬಲೆಗೆ ಬಿದ್ದರು. ಇನ್ನುಳಿದಂತೆ ಕೈಲ್ ಜೇಮಿಸನ್ (4), ಹರ್ಷಲ್ ಪಟೇಲ್ (12), ಮೊಹಮ್ಮದ್ ಸಿರಾಜ್ (8) ಹಾಗೂ ಯಜುವೇಂದ್ರ ಚಾಹಲ್ (2*) ರನ್ ಗಳಿಸಿದರು. 

ಅಂತಿಮವಾಗಿ 92 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಕೆಕೆಆರ್ ಪರ ವರುಣ್ ಚಕ್ರವರ್ತಿ ಹಾಗೂ ಆ್ಯಂಡ್ರೆ ರಸೆಲ್ ತಲಾ ಮೂರು ವಿಕೆಟ್‌, ಲಾಕಿ ಫರ್ಗ್ಯುಸನ್ ಎರಡು ಮತ್ತು ಪ್ರಸಿದ್ಧ ಕೃಷ್ಣ ಒಂದು ವಿಕೆಟ್ ಪಡೆದರು. 
 

ರಸೆಲ್, ಚಕ್ರವರ್ತಿ ಮಾರಕ ದಾಳಿಗೆ ತತ್ತರಿಸಿದ ಆರ್‌ಸಿಬಿ

ಕೋಲ್ಕತ್ತ ನೈಟ್ ರೈಡರ್ಸ್ ಬೌಲರ್‌ಗಳ ನಿಖರ ದಾಳಿಗೆ ಸಿಲುಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 19 ಓವರ್‌ಗಳಲ್ಲಿ ಕೇವಲ ರನ್ನಿಗೆ 92 ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಈ ಮೂಲಕ ಎದುರಾಳಿ ತಂಡಕ್ಕೆ 93 ರನ್‌ಗಳ ಸುಲಭ ಗೆಲುವಿನ ಗುರಿಯನ್ನು ಒಡ್ಡಿದೆ. 

ರಸೆಲ್ ಮ್ಯಾಜಿಕ್ ಬಾಲ್; ವಿಲಿಯರ್ಸ್ ಫಸ್ಟ್ ಬಾಲ್ ಡಕ್

ವರುಣ್ ಚಕ್ರವರ್ತಿ ಸ್ಪಿನ್ ಮೋಡಿ

 ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ (10) ಹಾಗೂ ವನಿಂದು ಹಸರಂಗಾ (0) ಹೊರದಬ್ಬಿದ ವರುಣ್ ಚಕ್ರವರ್ತಿ ಡಬಲ್ ಆಘಾತ ನೀಡಿದರು. ಇದರೊಂದಿಗೆ 63 ರನ್ನಿಗೆ ಆರು ವಿಕೆಟ್ ಕಳೆದುಕೊಂಡಿತು. ಈ ಪೈಕಿ ಐಪಿಎಲ್‌ಗೆ ಪದಾರ್ಪಣೆ ಮಾಡಿರುವ ಹಸರಂಗಾ ಮೊದಲ ಎಸೆತದಲ್ಲೇ ಔಟಾದರು. 

ಮ್ಯಾಕ್ಸ್‌ವೆಲ್, ಹಸರಂಗಾ ವಿಕೆಟ್ ಪತನ

ಎಬಿ ಡಿ ವಿಲಿಯರ್ಸ್ ಶೂನ್ಯಕ್ಕೆ ಔಟ್

ಆ್ಯಂಡ್ರೆ ರಸೆಲ್ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆದ ಎಬಿ ಡಿ ವಿಲಿಯರ್ಸ್ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು. ಇದರೊಂದಿಗೆ 52 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡ ಆರ್‌ಸಿಬಿ ಸಂಕಷ್ಟಕ್ಕೊಳಗಾಗಿತ್ತು.

16 ರನ್ ಗಳಿಸಿ ಭರತ್ ಔಟ್

ಚೊಚ್ಚಲ ಪಂದ್ಯವನ್ನಾಡುತ್ತಿರುವ ಕೆ.ಎಸ್. ಭರತ್ (16) ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲಾಗಲಿಲ್ಲ. ಪರಿಣಾಮ 51 ರನ್ನಿಗೆ ಆರ್‌ಸಿಬಿ ಮೂರನೇ ವಿಕೆಟ್ ಕಳೆದುಕೊಂಡಿತು.

ಪಡಿಕ್ಕಲ್ ನಿರ್ಗಮನ

ನಾಯಕ ವಿರಾಟ್ ಕೊಹ್ಲಿ (5) ಬೆನ್ನಲ್ಲೇ ದೇವದತ್ತ ಪಡಿಕ್ಕಲ್ (22) ವಿಕೆಟ್ ಕಳೆದುಕೊಂಡಿರುವ ಆರ್‌ಸಿಬಿ ಹಿನ್ನಡೆ ಅನುಭವಿಸಿತು. ಅಲ್ಲದೆ ಪವರ್ ಪ್ಲೇನಲ್ಲಿ ಎರಡು ವಿಕೆಟ್ ನಷ್ಟಕ್ಕೆ 41 ರನ್ ಗಳಿಸಲಷ್ಟೇ ಶಕ್ತವಾಗಿತ್ತು. 

ಕೊಹ್ಲಿ ವಿಕೆಟ್ ಪಡೆದ ಪ್ರಸಿದ್ಧ ಕೃಷ್ಣ

ಕೊಹ್ಲಿ ವೈಫಲ್ಯ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬೆಂಗಳೂರು ಆರಂಭ ಉತ್ತಮವಾಗಿರಲಿಲ್ಲ. ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದರು. ಈ ವಿಕೆಟ್ ಅನ್ನು ಪ್ರಸಿದ್ಧ ಕೃಷ್ಣ ಗಳಿಸಿದರು. 

ಕೊಹ್ಲಿಗೆ 200ನೇ ಐಪಿಎಲ್ ಪಂದ್ಯ

ಟಾಸ್ ಝಲಕ್

ಆರ್‌ಸಿಬಿ ಪರ ಕೆ.ಎಸ್. ಭರತ್, ಹಸರಂಗಾ ಪದಾರ್ಪಣೆ

ಟಾಸ್ ಗೆದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. 

ವಿರಾಟ್ ಕೊಹ್ಲಿ ತಯಾರಿ

ಆರ್‌ಸಿಬಿ ಮುಂದಿನ ನಾಯಕ ಯಾರು?

ಆರ್‌ಸಿಬಿ vs ಕೆಕೆಆರ್

ಗೆಲುವಿನ ಓಟ ಮುಂದುವರಿಸುವ ತವಕದಲ್ಲಿ ಆರ್‌ಸಿಬಿ

ಕೋವಿಡ್ ಸೇನಾನಿಗಳಿಗೆ ಆರ್‌ಸಿಬಿ ಗೌರವ

ವಿರಾಟ್ ಕೊಹ್ಲಿ 200 ಪಂದ್ಯಗಳ ಮೈಲಿಗಲ್ಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.