ADVERTISEMENT

IPL 2023 ಹೊಸ ನಿಯಮ | ಟಾಸ್‌ ಬಳಿಕವೂ ಪ್ಲೇಯಿಂಗ್‌ XI ಬದಲಾವಣೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2023, 15:16 IST
Last Updated 22 ಮಾರ್ಚ್ 2023, 15:16 IST
   

ಬೆಂಗಳೂರು: 2023ರ ಐಪಿಎಲ್‌ ಆರಂಭಕ್ಕೂ ಮುನ್ನ ಬಿಸಿಸಿಐ ಕೆಲವು ಹೊಸ ನಿಯಮಗಳನ್ನು ಬಿಡುಗಡೆ ಮಾಡಿದ್ದು, ಟಾಸ್ ಬಳಿಕವೂ ಪ್ಲೇಯಿಂಗ್‌ XI ಬದಲಾಯಿಸುವ ಅವಕಾಶವನ್ನು ಕಲ್ಪಿಸಲಾಗಿದೆ.

ಹೊಸ ನಿಯಮದ ಅನುಸಾರ, ಟಾಸ್ ಬಳಿಕ ತಂಡಗಳ ಕಪ್ತಾನರು ಆಡುವ XI ರ ಬಳಗ ಹಾಗೂ 5 ಬದಲಿ ಆಟಗಾರರನ್ನು ಮ್ಯಾಚ್‌ ರೆಫರಿಗೆ ಬರವಣಿಗೆ ಮೂಲಕ ನೀಡಬೇಕು. ಪಂದ್ಯ ಆರಂಭಕ್ಕೂ ಮುನ್ನ ಎದುರಾಳಿ ತಂಡದ ಕ್ಯಾಪ್ಟನ್‌ ಗಮನಕ್ಕೆ ತಾರದೆ ಈಗಾಗಲೇ ನೀಡಿರುವ ಆಡುವ ಬಳಗದ XI ರಲ್ಲಿ ಬದಲಾವಣೆ ಮಾಡುವಂತಿಲ್ಲ ಎಂದು ಹೊಸ ನಿಯಮದಲ್ಲಿ ಹೇಳಲಾಗಿದೆ.

ಹೊಸ ನಿಯಮದ ಪ್ರಕಾರ ಒಂದು ವೇಳೆ ಟಾಸ್‌ ಬಳಿಕ, ಆಡುವ XIರ ಬಳಗವನ್ನು ಬದಲಾವಣೆ ಮಾಡಬೇಕೆಂದು ಅನಿಸಿದರೆ, ಪಂದ್ಯ ಆರಂಭವಾಗುವುದಕ್ಕೂ ಮುನ್ನ ಮ್ಯಾಚ್‌ ರೆಫರಿಗೆ ತಿಳಿಸುವ ಮೂಲಕ ಬದಲಾವಣೆ ಮಾಡಬಹುದು.

ADVERTISEMENT

ಈವೆರೆಗೆ ಟಾಸ್‌ ಬಳಿಕ ಪ್ಲೇಯಿಂಗ್‌ XIನಲ್ಲಿ ಬದಲಾವಣೆ ಮಾಡುವ ಅವಕಾಶ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.