ADVERTISEMENT

ವಿರಾಟ್ ನಾಯಕತ್ವ ಬಿಡುವುದಕ್ಕೂ ಸೋಲಿಗೂ ಸಂಬಂಧವಿಲ್ಲ: ಆರ್‌ಸಿಬಿ ಮುಖ್ಯ ಕೋಚ್

ಆರ್‌ಸಿಬಿ ಮುಖ್ಯ ಕೋಚ್ ಮೈಕ್ ಹೆಸನ್

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 15:20 IST
Last Updated 21 ಸೆಪ್ಟೆಂಬರ್ 2021, 15:20 IST
ಮೈಕ್ ಹೆಸನ್
ಮೈಕ್ ಹೆಸನ್   

ಅಬುಧಾಬಿ (ಪಿಟಿಐ): ಕೋಲ್ಕತ್ತ ನೈಟ್ ರೈಡರ್ಸ್‌ ಎದುರಿನ ಸೋಲಿಗೂ, ಈ ಐಪಿಎಲ್ ನಂತರ ವಿರಾಟ್ ಕೊಹ್ಲಿ ನಾಯಕತ್ವ ಬಿಡುವುದಾಗಿ ಹೇಳಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಹೇಳಿಕೆಯು ತಂಡದ ಆಟಗಾರರ ಮೇಲೆ ಪರಿಣಾಮ ಬೀರಿದೆ ಎಂಬುದು ಸರಿಯಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಮೈಕ್ ಹೆಸನ್ ಸ್ಪಷ್ಟಪಡಿಸಿದ್ದಾರೆ.

‘ವಿರಾಟ್ ನೀಡಿರುವ ಹೇಳಿಕೆ ನೀಡುವುದಕ್ಕೂ ಮುನ್ನವೇ ತಂಡದ ಬಹುತೇಕ ಆಟಗಾರರಿಗೆ ವಿಷಯ ತಿಳಿದಿತ್ತು. ಈ ಕುರಿತು ಸಾಕಷ್ಟು ಚರ್ಚೆಗಳೂ ನಡೆದಿದ್ದವು. ಆದ್ದರಿಂದ ಅಂತಹ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಆದರೆ, ಪಂದ್ಯದಲ್ಲಿ ನಾವು ಸೋಲಲು ಕಾರಣ ಬ್ಯಾಟಿಂಗ್‌ನಲ್ಲಿ ಹಿಂದುಳಿದಿದ್ದು ಕಾರಣ’ ಎಂದರು.

‘ತಂಡದಲ್ಲಿ ಬಹಳ ಪ್ರತಿಭಾನ್ವಿತ ಆಟಗಾರರು ಇದ್ದಾರೆ. ತ್ವರಿತವಾಗಿ ಪುಟಿದೇಳುವ ಗುಣ ಅವರಲ್ಲಿದೆ. ಮುಂದಿನ ಹಂತದಲ್ಲಿ ಉತ್ತಮವಾಗಿ ಆಡಲಿದ್ದಾರೆ’ ಎಂದು ವಿಶ್ವಾಸವ್ಯಕ್ತಪಡಿಸಿದರು.

ADVERTISEMENT

‘ಕೋಲ್ಕತ್ತದ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರ ಸ್ಪಿನ್‌ ಬೌಲಿಂಗ್ ಎದುರಿಸುವುದು ತುಸು ಸವಾಲಿನ ಕೆಲಸ. ಅದಕ್ಕಾಗಿಯೇ ಒಂದರ ಹಿಂದೆ ಒಂದು ವಿಕೆಟ್ ಪತನವಾದವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.