ADVERTISEMENT

ಆಡದೇ ಸೆಮಿಫೈನಲ್ ‍ಪ್ರವೇಶಿಸಿದ ಬೆಂಗಳೂರು ಯುನೈಟೆಡ್‌

ಡುರಾಂಡ್ ಕಪ್: ಆರ್ಮಿ ರೆಡ್‌ ಪಾಳಯದಲ್ಲಿ ಕೋವಿಡ್ ಸೋಂಕು

ಪಿಟಿಐ
Published 23 ಸೆಪ್ಟೆಂಬರ್ 2021, 13:55 IST
Last Updated 23 ಸೆಪ್ಟೆಂಬರ್ 2021, 13:55 IST
ಡುರಾಂಡ್ ಕಪ್ ಟೂರ್ನಿಯ ಪಂದ್ಯವೊಂದರ ನೋಟ –ಪಿಟಿಐ ಚಿತ್ರ
ಡುರಾಂಡ್ ಕಪ್ ಟೂರ್ನಿಯ ಪಂದ್ಯವೊಂದರ ನೋಟ –ಪಿಟಿಐ ಚಿತ್ರ   

ಕೋಲ್ಕತ್ತ: ಆಟಗಾರರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಕಾರಣ ಆರ್ಮಿ ರೆಡ್‌ ತಂಡ ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಡದೇ ಇರಲು ನಿರ್ಧರಿಸಿದೆ. ಹೀಗಾಗಿ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡ ಆಡದೇ ಸೆಮಿಫೈನಲ್ ಪ್ರವೇಶಿಸಿತು.

ಎಫ್‌ಸಿ ಬೆಂಗಳೂರು ಯುನೈಟೆಡ್ ಮತ್ತು ಆರ್ಮಿ ರೆಡ್ ತಂಡಗಳ ಮುಖಾಮುಖಿ ಶುಕ್ರವಾರ ನಿಗದಿಯಾಗಿತ್ತು. ಕಲ್ಯಾಣಿ ಕ್ರೀಡಾಂಗಣದಲ್ಲಿ ನಡೆಯಬೇಕಾಗಿದ್ದ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಗೋವಾ ಮತ್ತು ಡೆಲ್ಲಿ ಎಫ್‌ಸಿ ನಡುವಿನ ಎಂಟರ ಘಟ್ಟದ ಹಣಾಹಣಿ ನಿಗದಿಯಿಂದ ನಡೆಯಲಿದೆ. ಆದರೆ ಕಲ್ಯಾಣಿ ಬದಲು ಕೋಲ್ಕತ್ತದಲ್ಲಿ ಪಂದ್ಯ ಆಯೋಜಿಸಲು ನಿರ್ಧರಿಸಲಾಗಿದೆ.

‘ಆಟಗಾರರು ಮತ್ತು ಸಿಬ್ಬಂದಿಯ ಆರೋಗ್ಯ ರಕ್ಷಣೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಟೂರ್ನಿಯನ್ನು ನಿರಾತಂಕವಾಗಿ ನಡೆಸುವ ಜವಾಬ್ದಾರಿಯೂ ಇರುವುದರಿಂದ ಈ ನಿರ್ಧಾರ ಅನಿವಾರ್ಯವಾಗಿತ್ತು’ ಎಂದು ಆಯೋಜಕರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.