ADVERTISEMENT

7ನೇ ಬಾರಿಗೆ ಬಾಲನ್‌ ಡಿ'ಓರ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಮೆಸ್ಸಿ

ಏಜೆನ್ಸೀಸ್
Published 30 ನವೆಂಬರ್ 2021, 2:08 IST
Last Updated 30 ನವೆಂಬರ್ 2021, 2:08 IST
7 ಬಾರಿ ಬಾಲನ್‌ ಡಿಓರ್‌ ಪ್ರಶಸ್ತಿಗೆ ಭಾಜನರಾದ ಲಯೊನೆಲ್‌ ಮೆಸ್ಸಿ (ಎಎಫ್‌ಪಿ ಚಿತ್ರ)
7 ಬಾರಿ ಬಾಲನ್‌ ಡಿಓರ್‌ ಪ್ರಶಸ್ತಿಗೆ ಭಾಜನರಾದ ಲಯೊನೆಲ್‌ ಮೆಸ್ಸಿ (ಎಎಫ್‌ಪಿ ಚಿತ್ರ)   

ಪ್ಯಾರಿಸ್‌: ಅರ್ಜೆಂಟೀನಾದ ಫುಟ್ಬಾಲ್‌ ಆಟಗಾರ ಲಯೊನೆಲ್‌ ಮೆಸ್ಸಿ ಅವರು ವಿಶ್ವದ ಉತ್ತಮ ಆಟಗಾರ ವಿಭಾಗದಲ್ಲಿ ಪ್ರತಿಷ್ಠಿತ ಬಾಲನ್‌ ಡಿ'ಓರ್‌ ಪ್ರಶಸ್ತಿಯನ್ನು 7ನೇ ಬಾರಿಗೆ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ರಾಬರ್ಟ್‌ ಲೆವಂಡೊಸ್ಕಿ ಮತ್ತು ಜಾರ್ಗಿನ್‌ಹೊ ಅವರನ್ನು ಹಿಂದಿಕ್ಕಿದ್ದಾರೆ.

ಫ್ರಾನ್ಸ್‌ ಫುಟ್ಬಾಲ್‌ ನಿಯತಕಾಲಿಕೆ ನೀಡುವ ಬಾಲನ್‌ ಡಿ'ಓರ್‌ ಪ್ರಶಸ್ತಿಯನ್ನು ಮೆಸ್ಸಿ ಅವರು 2009, 2010, 2011, 2012, 2015 ಮತ್ತು 2019ರಲ್ಲಿ ವಿಜೇತರಾಗಿದ್ದರು. ಕಳೆದ ವರ್ಷ ಜುಲೈ ತಿಂಗಳಲ್ಲಿ ಅರ್ಜೆಂಟೀನಾಗೆ ಮೊದಲ ಬಾರಿಗೆ ಕೋಪಾ ಅಮೆರಿಕ ಟ್ರೋಫಿಯನ್ನು ತಂದುಕೊಟ್ಟ ಬಳಿಕ 7ನೇ ಬಾರಿಗೆ ಮೆಸ್ಸಿ ಅವರು ಡಿ'ಓರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

'ಇದನ್ನು ಪುನಃ ಕೇಳಲು ಅದ್ಭುತವೆನಿಸುತ್ತಿದೆ. ಎರಡು ವರ್ಷಗಳ ಹಿಂದೆ ಸಿಕ್ಕಿದ ಪ್ರಶಸ್ತಿಯೇ ಕೊನೆ ಎಂದುಕೊಂಡಿದ್ದೆ. ಕೋಪಾ ಅಮೆರಿಕವನ್ನು ಗೆದ್ದಿದ್ದು ಪ್ರಮುಖವಾಯಿತು' ಎಂದು ಮೆಸ್ಸಿ ಪ್ಯಾರಿಸ್‌ನ ಥಿಯೇಟರ್‌ ಡು ಚಟೆಲೆಟ್‌ನಲ್ಲಿ ಹೇಳಿದ್ದಾರೆ.

ADVERTISEMENT

ಸ್ಪೈನ್‌ ಅಲೆಕ್ಸಿಯಾಗೆ ಡಿ'ಓರ್‌ ಪ್ರಶಸ್ತಿ
ಮಹಿಳೆಯರ ವಿಭಾಗದಲ್ಲಿ ಸ್ಪೈನ್‌ನ ಫುಟ್ಬಾಲ್‌ ಆಟಗಾರ್ತಿಅಲೆಕ್ಸಿಯಾ ಪುಟೆಲ್ಲಾ ಅವರು ಬಾಲನ್‌ ಡಿ'ಓರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. 27 ವರ್ಷದ ಅಲೆಕ್ಸಿಯಾ ಡಿ'ಓರ್‌ ಪ್ರಶಸ್ತಿ ಪಡೆದ 3ನೇ ಮಹಿಳೆಯಾಗಿದ್ದಾರೆ. ಕಳೆದ ವರ್ಷ ಮೆಗನ್‌ ರಾಪಿನೊ ಈ ಪ್ರಶಸ್ತಿ ಪಡೆದಿದ್ದರು. 2018ರಲ್ಲಿ ಮಹಿಳೆಯ ವಿಭಾಗದ ಬಾಲನ್‌ ಡಿ'ಓರ್‌ ಪ್ರಶಸ್ತಿ ನೀಡಲು ಆರಂಭಿಸಲಾಗಿದ್ದು, ಅದಾ ಹಿಗರ್‌ಬರ್ಗ್‌ ಮೊದಲ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.