ADVERTISEMENT

ಯೂರೊ ಕಪ್ ಫುಟ್‌ಬಾಲ್: ಇಂಗ್ಲೆಂಡ್‌ಗೆ ನಿರಾಸೆ, ಇಟಲಿ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 4:06 IST
Last Updated 12 ಜುಲೈ 2021, 4:06 IST
ಇಟಲಿ ತಂಡದ ಸಂಭ್ರಮ
ಇಟಲಿ ತಂಡದ ಸಂಭ್ರಮ   

ಲಂಡನ್‌: ಭಾನುವಾರ ರಾತ್ರಿವೆಂಬ್ಲಿ ಕ್ರೀಡಾಂಗಣದಲ್ಲಿ ನಡೆದ ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯದಲ್ಲಿ ಇಟಲಿ ಚಾಂಪಿಯನ್‌ ಆಯಿತು.

ಐದೂವರೆ ದಶಕದಿಂದ ಪ್ರಶಸ್ತಿಯ ಬರ ಅನುಭವಿಸುತ್ತಿರುವ ಇಂಗ್ಲೆಂಡ್ ತಂಡ ಫೈನಲ್‌ ಪಂದ್ಯದಲ್ಲಿ ಮುಗ್ಗರಿಸಿತು. ನಿಗದಿತ ಅವಧಿಯ ಆಟ 1-1 ರಲ್ಲಿ ಸಮನಾದ ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿ 3-2 ಗೋಲುಗಳಿಂದ ಜಯಗಳಿಸಿತು.

ಪಂದ್ಯ ಆರಂಭಗೊಂಡ 2ನೇ ನಿಮಿಷದಲ್ಲಿ ಇಂಗ್ಲೆಂಡ್‌ ಗೋಲ್‌ ದಾಖಲಿಸಿ ಉತ್ತಮ ಆರಂಭ ಕಂಡಿತು. ಆದರೆ 67ನೇ ನಿಮಿಷದಲ್ಲಿ ಇಟಲಿ ಕೂಡ ಗೋಲ್‌ ದಾಖಲಿಸಿತು. ಪಂದ್ಯ ಸಮನಾದ ಬಳಿಕಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿ ಜಯದ ನಗು ಬೀರುವ ಮೂಲಕಎರಡನೇ ಸಲಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ ಆಯಿತು.

ADVERTISEMENT

2018ರ ವಿಶ್ವಕಪ್‌ ಟೂರ್ನಿಗೆ ಅರ್ಹತೆ ಗಳಿಸಲೂ ಸಾಧ್ಯವಾಗದ ಇಟಲಿ ಯೂರೊ ಕಪ್‌ ಗೆಲ್ಲುವ ಮೂಲಕ ಗೌರವ ಮರಳಿ ಪಡೆದುಕೊಂಡಿದೆ. ಪ್ರಮುಖ ಟೂರ್ನಿಯೊಂದರಲ್ಲಿ ಇಂಗ್ಲೆಂಡ್ ಒಮ್ಮೆಯೂ ಇಟಲಿಯನ್ನು ಸೋಲಿಸಲು ಸಾಧ್ಯವಾಗಿಲ್ಲ. ನಾಲ್ಕು ಬಾರಿ ವಿಶ್ವಕಪ್ ಪ್ರಶಸ್ತಿ ಗೆದ್ದಿರುವ ಇಟಲಿ 2ನೇ ಸಲ ಯೂರೊ ಕಪ್‌ನಲ್ಲಿ ಚಾಂಪಿಯನ್ ಆಗಿದೆ. 1968ರಲ್ಲಿ ತಂಡ ಈ ಸಾಧನೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.