ADVERTISEMENT

ಫುಟ್‌ಬಾಲ್‌: ಭಾರತ–ನೇಪಾಳ ಪಂದ್ಯ ಡ್ರಾ

ಪಿಟಿಐ
Published 2 ಸೆಪ್ಟೆಂಬರ್ 2021, 19:39 IST
Last Updated 2 ಸೆಪ್ಟೆಂಬರ್ 2021, 19:39 IST
ಅನಿರುದ್ಧ ಥಾಪಾ
ಅನಿರುದ್ಧ ಥಾಪಾ   

ಕಠ್ಮಂಡು: ಭಾರತ ತಂಡವು ಗುರುವಾರ ಇಲ್ಲಿ ನಡೆದ ನೇಪಾಳ ವಿರುದ್ಧದ ಸ್ನೇಹಪರ ಫುಟ್‌ಬಾಲ್ ಪಂದ್ಯವನ್ನು 1–1ರಿಂದ ಡ್ರಾ ಮಾಡಿಕೊಂಡಿತು.

ಸ್ಯಾಫ್‌ ಚಾಂಪಿಯನ್‌ಷಿಪ್‌ಗೆ ಪೂರ್ವಸಿದ್ಧತೆಯಾಗಿ ನಡೆದ ಪಂದ್ಯದಲ್ಲಿ ಆತಿಥೇಯ ತಂಡದ ಪರ ಅಂಜನ್ ಬಿಸ್ತಾ 36ನೇ ನಿಮಿಷದಲ್ಲಿ ಗೋಲು ದಾಖಲಿಸಿ ಮುನ್ನಡೆ ತಂದುಕೊಟ್ಟಿದ್ದರು. ಬಳಿಕ ಭಾರತದ ಅನಿರುದ್ಧ ಥಾಪಾ ಕಾಲ್ಚಳಕ ತೋರಿ ಪಂದ್ಯವನ್ನು ಸಮಬಲಗೊಳ್ಳುವಂತೆ ಮಾಡಿದರು.

ಉಭಯ ತಂಡಗಳ ನಡುವಣ ಎರಡನೇ ಪಂದ್ಯವು ಭಾನುವಾರ ನಡೆಯಲಿದೆ.

ADVERTISEMENT

ಸ್ಯಾಫ್‌ ಚಾಂಪಿಯನ್‌ಷಿಪ್‌ ಅಕ್ಟೋಬರ್ 3ರಿಂದ 13ರವರೆಗೆ ಮಾಲ್ಡಿವ್ಸ್‌ನಲ್ಲಿ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.