ADVERTISEMENT

ಜಾರ್ಖಂಡ್‌ನಲ್ಲಿ ಮಹಿಳಾ ಫುಟ್‌ಬಾಲ್ ತಂಡದ ಶಿಬಿರ

ಪಿಟಿಐ
Published 13 ಆಗಸ್ಟ್ 2021, 15:33 IST
Last Updated 13 ಆಗಸ್ಟ್ 2021, 15:33 IST
ಅದಿತಿ ಚೌಹಾಣ್ –ಟ್ವಿಟರ್ ಚಿತ್ರ
ಅದಿತಿ ಚೌಹಾಣ್ –ಟ್ವಿಟರ್ ಚಿತ್ರ   

ನವದೆಹಲಿ: ಭಾರತ ಮಹಿಳಾ ಫುಟ್‌ಬಾಲ್‌ ತಂಡದ ಅಭ್ಯಾಸ ಶಿಬಿರ ಜಾರ್ಖಂಡ್‌ನಲ್ಲಿ ಇದೇ 16ರಿಂದ ನಡೆಯಲಿದೆ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ (ಎಐಎಫ್‌ಎಫ್‌) ಶುಕ್ರವಾರ ತಿಳಿಸಿದೆ.

ಮುಂದಿನ ವರ್ಷ ನಡೆಯಲಿರುವ ಎಎಫ್‌ಸಿ ಏಷ್ಯನ್ ಕಪ್ ಟೂರ್ನಿಗೆ ಸಜ್ಜಾಗುವುದು ಈ ಶಿಬಿರದ ಪ್ರಮುಖ ಗುರಿ. ಜನವರಿ 20ರಿಂದ ಫೆಬ್ರುವರಿ 6ರ ವರೆಗೆ ಭಾರತದಲ್ಲಿ ಟೂರ್ನಿ ನಡೆಯಲಿದೆ. ಶಿಬಿರಕ್ಕೆ 30 ಮಂದಿ ಆಟಗಾರರ ಪಟ್ಟಿಯನ್ನು ಕೋಚ್‌ ಥಾಮಸ್ ಡೆನರ್ಬಿ ಶುಕ್ರವಾರ ಬಿಡುಗಡೆ ಮಾಡಿದ್ದಾರೆ.

ಪುನಶ್ಚೇತನ ಶಿಬಿರದಲ್ಲಿರುವ ಬಾಲಾದೇವಿ ಅವರನ್ನು ಆರೋಗ್ಯ ಸ್ಥಿತಿಯ ಪರಿಶೀಲನೆಗಾಗಿ ಶಿಬಿರಕ್ಕೆ ಕರೆಸಿಕೊಳ್ಳಲಾಗುವುದು. ದಾಲಿಮಾ ಚಿಬ್ಬೇರ್‌ ಮೊದಲ 10 ದಿನ ಮಾತ್ರ ಶಿಬಿರದಲ್ಲಿರುವರು. ನಂತರ ಕೆನಡಾದಲ್ಲಿ ಲೀಗ್‌ ಪಂದ್ಯ ಆಡಲು ತೆರಳುವರು. ಇದು ಅವರು ಮೊದಲೇ ಒಪ್ಪಿಕೊಂಡ ಕಾರ್ಯವಾಗಿದೆ. ಇವರಿಬ್ಬರನ್ನು 30 ಮಂದಿಯ ಪಟ್ಟಿಯಿಂದ ಪ್ರತ್ಯೇಕವಾಗಿರಿಸಲಾಗಿದೆ.

ADVERTISEMENT

ಶಿಬಿರದಲ್ಲಿ ಪಾಲ್ಗೊಳ್ಳುವ ಆಟಗಾರ್ತಿಯರು: ಗೋಕ್‌ಕೀಪರ್‌: ಅದಿತಿ ಚೌಹಾಣ್‌, ಸೌಮ್ಯಾ ನಾರಾಯಣಸ್ವಾಮಿ, ಲಿಂಥೊಯ್ಗಂಬಿ ದೇವಿ, ಶ್ರೇಯಾ ಹೂಡಾ; ಡಿಫೆಂಡರ್‌: ಜಪಮಣಿ ತುಡು, ಆಶಾಲತಾ ದೇವಿ, ಸ್ವೀಟಿ ದೇವಿ, ಹೇಮಂ ಶಿಲ್ಕಿ ದೇವಿ, ಮೈಕೆಲ್‌ ಕಾಸ್ಟನ್ಹ, ರಿತು ರಾಣಿ, ರಂಜನಾ ಚಾನು ಸೊರೊಕೈಬಮ್‌, ಲಿಂಥೊಂಯ್ಗಂಬಿ ದೇವಿ, ಕೃತಿನಾ ದೇವಿ ತೌನೋಜಮ್, ಅಂಜು ತಮಾಂಗ್‌, ಅಸೇಮ್ ರೋಜಾ ದೇವಿ; ಮಿಡ್‌ಫೀಲ್ಡರ್‌: ಇಂದುಮತಿ ಕದಿರೇಶನ್‌, ಸಂಗೀತಾ ಬಾಸ್ಫೋರೆ, ಮಾರ್ಟಿನಾ ತೊಕ್ಜೊಮ್‌, ಡಂಗ್ಮೆ ಗ್ರೇಸ್‌, ಸೌಮ್ಯಾ ಗುಗುಲೊತ್‌, ಸುಮಿತ್ರಾ ಕಾಮರಾಜ್‌, ಮರಿಯಮ್ಮಾಳ್ ಬಾಲಮುರುಗನ್‌, ಸಂಜು, ಮನೀಷಾ; ಫಾರ್ಡರ್ಡ್‌: ರೇಣು, ಕರೀಷ್ಮಾ ಶಿರ್ವೋಯ್ಕರ್‌, ಸಂಧ್ಯಾ ರಂಗನಾಥನ್‌, ಸುಮತಿ ಕುಮಾರಿ, ದಯಾ ದೇವಿ, ಪ್ಯಾರಿ ಕ್ಸಕ್ಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.