ADVERTISEMENT

ಯುಇಎಫ್‌ಎ ಮಹಿಳಾ ಚಾಂಪಿಯನ್ಸ್‌ ಲೀಗ್‌ ಫುಟ್‌ಬಾಲ್‌: ಮನೀಷಾ ಕಲ್ಯಾಣ್‌ ಸಾಧನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 15:24 IST
Last Updated 19 ಆಗಸ್ಟ್ 2022, 15:24 IST
ಮನೀಷಾ ಕಲ್ಯಾಣ್
ಮನೀಷಾ ಕಲ್ಯಾಣ್   

ನವದೆಹಲಿ: ಯುವ ಫುಟ್‌ಬಾಲ್‌ ಆಟಗಾರ್ತಿ ಮನೀಷಾ ಕಲ್ಯಾಣ್‌ ಅವರು ಯುಇಎಫ್‌ಎ ಮಹಿಳಾ ಚಾಂಪಿಯನ್ಸ್‌ ಲೀಗ್‌ನಲ್ಲಿ ಆಡಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡರು.

ಸೈಪ್ರಸ್‌ನ ಅಪೊಲೊನ್‌ ಲೇಡಿಸ್‌ ಎಫ್‌ಸಿ ಕ್ಲಬ್‌ ಪ್ರತಿನಿಧಿಸುತ್ತಿರುವ ಅವರು ಸೈಪ್ರಸ್‌ನ ಎನ್‌ಗೊಮಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆಡಿದರು. ಲಾತ್ವಿಯದ ಎಸ್‌ಎಫ್‌ಕೆ ರಿಗಾ ಎದುರಿನ ಪಂದ್ಯದ 60ನೇ ನಿಮಿಷದಲ್ಲಿ ಬದಲಿ ಆಟಗಾರ್ತಿಯಾಗಿ ಕಣಕ್ಕಿಳಿದರು. ಈ ಪಂದ್ಯವನ್ನು ಅಪೊಲೊನ್‌ ಕ್ಲಬ್‌ 3–0 ಗೋಲುಗಳಿಂದ ಗೆದ್ದಿತು.

20 ವರ್ಷದ ಮನೀಷಾ ವಿದೇಶಿ ಕ್ಲಬ್‌ ಪರ ಆಡಲು ಒಪ್ಪಂದ ಮಾಡಿಕೊಂಡ ಭಾರತದ ನಾಲ್ಕನೇ ಫುಟ್‌ಬಾಲ್‌ ಆಟಗಾರ್ತಿ ಎನಿಸಿಕೊಂಡಿದ್ದರು.

ADVERTISEMENT

ರಾಷ್ಟ್ರೀಯ ತಂಡ ಮತ್ತು ಇಂಡಿಯನ್‌ ವುಮೆನ್ಸ್‌ ಲೀಗ್‌ನಲ್ಲಿ ಗೋಕುಲಂ ಕೇರಳ ತಂಡದ ಪರ ಅವರು ಗಮನಾರ್ಹ ಪ್ರದರ್ಶನ ನೀಡಿದ್ದರು. ಈಚೆಗೆ ಎಐಎಫ್‌ಎಫ್‌ ವರ್ಷದ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.