ADVERTISEMENT

ಫುಟ್‌ಬಾಲ್ ಟೂರ್ನಿ: ಶುಶ್ರೂತ್‌ ಹ್ಯಾಟ್ರಿಕ್‌ ಗೋಲು

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 19:45 IST
Last Updated 31 ಜುಲೈ 2021, 19:45 IST

ಬೆಂಗಳೂರು: ಶುಶ್ರೂತ್ ಕೆ. ರಾಜ್‌ಕುಮಾರ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ರೂಟ್ಸ್ ಅಕಾಡೆಮಿ ತಂಡವು ಕೆಎಸ್‌ಎಫ್ಎ–ಬಿಡಿಎಫ್‌ಎ ‘ಸಿ’ ಡಿವಿಷನ್ ನಾಕೌಟ್ ಫುಟ್‌ಬಾಲ್ ಟೂರ್ನಿಯಲ್ಲಿ ಜಯ ಗಳಿಸಿತು.

ಇಲ್ಲಿಯ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹಣಾಹಣಿಯಲ್ಲಿ ಆ ತಂಡಕ್ಕೆ 4–0ಯಿಂದ ವಿಲಿಯಮ್‌ ಎಫ್‌ಸಿ ಎದುರು ಜಯ ಒಲಿಯಿತು. ಶುಶ್ರೂತ್ ಅವರು 23, 29 ಮತ್ತು 48ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಇನ್ನೊಂದು ಗೋಲನ್ನು ಇರ್ವಿನ್ ನಿಲುಸ್‌ ಕಾರ್ಡೊಜಾ(40ನೇ ನಿಮಿಷ) ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ರಿಚಮಂಡ್ ಪ್ಯಾಂಥರ್ಸ್ ಎಫ್‌ಸಿ ತಂಡವು 2–1ರಿಂದ ತಮರಾಯಿಕಣ್ಣನ್ ಎಫ್‌ಸಿ ತಂಡವನ್ನು ಮಣಿಸಿತು. ವಿಜೇತ ತಂಡದ ಪರ ಸಿದ್ಧಾರ್ಥ ಭಾರ್ಗವ 17ನೇ ನಿಮಿಷ ಮತ್ತು ರೋಹನ್ ಜಾಕೋಬ್ 26ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು. ತಮರಾಯಿಕಣ್ಣನ್ ಪರ ಶ್ರೀಹರಿ (45ನೇ ನಿಮಿಷ) ಗೋಲು ಹೊಡೆದರು.

ADVERTISEMENT

ಇನ್ನೊಂದು ಪಂದ್ಯದಲ್ಲಿ ಅಲ್ ಫತೇಹ್ ಎಫ್‌ಸಿ ತಂಡವು 1–0ಯಿಂದ ಶಮಂತ್ ಎಫ್‌ಸಿ ಎದುರು ಜಯ ಸಾಧಿಸಿತು. ಅಲ್ ಪತೇಹ್ ತಂಡದ ಶಾರಿಕ್‌ 10ನೇ ನಿಮಿಷದಲ್ಲಿ ಗೋಲು ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.