ADVERTISEMENT

ಬಹರೇನ್ ಪ್ಯಾರಾ ಬ್ಯಾಡ್ಮಿಂಟನ್: ಭಗತ್‌ಗೆ ಚಿನ್ನ ಡಬಲ್

​ಪ್ರಜಾವಾಣಿ ವಾರ್ತೆ
Published 21 ಮೇ 2022, 18:47 IST
Last Updated 21 ಮೇ 2022, 18:47 IST
ಪ್ರಮೋದ್ ಭಗತ್
ಪ್ರಮೋದ್ ಭಗತ್   

ನವದೆಹಲಿ: ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಪ್ರಮೋದ್ ಭಗತ್ ಶನಿವಾರ ಮನಾಮದಲ್ಲಿ ನಡೆದ ಬಹರೇನ್ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎರಡು ಚಿನ್ನದ ಪದಕಗಳನ್ನು ಗಳಿಸಿದರು.

ಭಗತ್ ಅವರು ಪುರುಷರ ಎಸ್‌ಎಲ್‌3 ಸಿಂಗಲ್ಸ್‌ ಫೈನಲ್‌ನಲ್ಲಿ ಡೇನೀಲ್ ಬೆಥೆಲ್ ಅವರಿಂದ ವಾಕ್‌ ಓವರ್ ಪಡೆದರು. ಇದರಿಂದಾಗಿ ನಿರಾಯಾಸವಾಗಿ ಚಿನ್ನಕ್ಕೆ ಕೊರಳೊಡ್ಡಿದರು.

ಮಿಶ್ರ ಡಬಲ್ಸ್‌ನಲ್ಲಿ ಭಗತ್ ಅವರು ಮನೀಷಾ ರಾಮದಾಸ್ ಅವರೊಂದಿಗೆ 21–14, 21–11ರಿಂದ ಥಾಯ್ಲೆಂಡ್‌ನ ಸಿರಿಪಾಂಗ್ ಟೀಮಾರಾಮ್ ಮತ್ತು ಸೇನಸುಪಾ ಸಿರಿಪಾಂಗ್ ಟೀಮಾರಮ್ ವಿರುದ್ಧ ಜಯಿಸಿದರು.

ADVERTISEMENT

ಭಾರತದ ತರುಣ್ ಧಿಲ್ಲೋನ್ 21–9, 21–9ರಿಂದ ಪುರುಷರ ಸಿಂಗಲ್ಸ್‌ ಎಸ್‌ಎಲ್‌ 4 ಫೈನಲ್‌ನಲ್ಲಿ ಕೊರಿಯಾದ ಶಿನ್ ಕಿಯಾಂಗ್ ವ್ಯಾನ್ ವಿರುದ್ಧ ಗೆದ್ದರು ಚಿನ್ನದ ಪದಕ ಗಳಿಸಿದರು.

ಮಹಿಳೆಯರ ಸಿಂಗಲ್ಸ್‌ನ ಎಸ್‌ಎಲ್ 3 ವಿಭಾಗದಲ್ಲಿ ಮನದೀಪ್ ಕೌರ್ 5–21, 17–21ರಿಂದ ಹಲಿಮ್ ಯಿಲದಿಜ್ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.