ADVERTISEMENT

ಏಷ್ಯನ್ ಸ್ಕ್ವಾಷ್‌ ಫೆಡರೇಷನ್‌ಗೆ ಸೈರಸ್‌ ಪೂಂಚಾ ಉಪಾಧ್ಯಕ್ಷ

ಪಿಟಿಐ
Published 4 ಸೆಪ್ಟೆಂಬರ್ 2021, 19:51 IST
Last Updated 4 ಸೆಪ್ಟೆಂಬರ್ 2021, 19:51 IST

ಚೆನ್ನೈ: ಭಾರತ ಸ್ಕ್ವಾಷ್‌ ರ‍್ಯಾಕೆಟ್‌ ಫೆಡರೇಷನ್‌ನ (ಎಸ್‌ಆರ್‌ಎಫ್ಐ) ಪ್ರಧಾ ಕಾರ್ಯದರ್ಶಿಯಾಗಿರುವ ಸೈರಸ್‌ ಪೂಂಚಾ ಅವರು ಏಷ್ಯನ್ ಸ್ಕ್ವಾಷ್ ಫೆಡರೇಷನ್‌ಗೆ (ಎಎಸ್‌ಎಫ್‌) ಉಪಾಧ್ಯಕ್ಷರಾಗಿ ಶನಿವಾರ ಆಯ್ಕೆಯಾಗಿದ್ದಾರೆ.

ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಪೂಂಚಾ ಅವರನ್ನು ಎಎಸ್‌ಎಫ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಆಯ್ಕೆ ಮಾಡಲಾಗಿದ್ದು, ನಾಲ್ಕು ವರ್ಷಗಳ ಕಾಲ ಉಪಾಧ್ಯಕ್ಷ ಹುದ್ದೆಯಲ್ಲಿರುವರು ಎಂದು ಎಎಸ್‌ಎಫ್‌ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶ್ವ ಸ್ಕ್ವಾಷ್ಮಾಜಿ ಅಧ್ಯಕ್ಷ ಎನ್ ರಾಮಚಂದ್ರನ್ ಮತ್ತು ಪ್ರಸ್ತುತ ಎಸ್‌ಆರ್‌ಎಫ್‌ಐನ ಅಧ್ಯಕ್ಷ ದೇವೇಂದ್ರನಾಥ ಸಾರಂಗಿ ಅವರು ಈ ಮೊದಲು ಎಎಸ್‌ಎಫ್ ಉಪಾಧ್ಯಕ್ಷರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.