ADVERTISEMENT

ಕಜಕಸ್ತಾನ ಓಪನ್‌: ಫೈನಲ್‌ಗೆ ಸ್ನೇಹಿತ್‌

ಪಿಟಿಐ
Published 19 ಸೆಪ್ಟೆಂಬರ್ 2021, 18:19 IST
Last Updated 19 ಸೆಪ್ಟೆಂಬರ್ 2021, 18:19 IST

ನವದೆಹಲಿ: ಭಾರತದ ಫಿಡೆಲ್‌ ಸ್ನೇಹಿತ್ ಅವರುಐಟಿಟಿಎಫ್‌ ಕಜಕಸ್ತಾನ ಓಪನ್ ಟೇಬಲ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದ್ದಾರೆ.

ಭಾನುವಾರ ನಡೆದ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಅವರು ಬೆಲಾರಸ್‌ನ ಪವೆಲ್ ಪ್ಲಟನೊವ್‌ ಎದುರು 4–1ರ ಗೆಲುವು ಸಾಧಿಸಿದರು. ವಿಶ್ವ ಕ್ರಮಾಂಕದಲ್ಲಿ 405ನೇ ಸ್ಥಾನದಲ್ಲಿರುವ ಸ್ನೇಹಿತ್ ಚಿನ್ನದ ಪದಕದ ಪಂದ್ಯದಲ್ಲಿ 46ನೇ ರ‍್ಯಾಂಕಿಂಗ್‌ನ ಸ್ಥಳೀಯ ಆಟಗಾರ ಕಿರಿಲ್ ಜೆರಸಿಮೆಂಕೊ ಎದುರು ಸೆಣಸುವರು.

ಮಹಿಳೆಯರ ಡಬಲ್ಸ್‌ನಲ್ಲಿ ಕೌಶನಿ ನಾಥ್‌ ಮತ್ತು ಪ್ರಾಪ್ತಿ ಸೇನ್ ಜೋಡಿ ಉಜ್ಬೆಕಿಸ್ತಾನದ ಕಮಿಲ ಖಲಿಕೋವ ಮತ್ತು ಮೆಖ್ರಿನಿಸೊ ನೊರ್ಕುಲೊವ ಎದುರು 3–1ರಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿದರು. ಅಂತಿಮ ಹಣಾಹಣಿಯಲ್ಲಿ ಅವರು ರಷ್ಯಾದ ವಲೇರಿಯಾ ಕೊಟ್ಸ್ಯೂರ್‌ ಮತ್ತು ವಲೇರಿಯಾ ಶೆರ್ಬಟಿಖ್‌ ಎದುರು ಸೆಣಸುವರು.

ADVERTISEMENT

ಪುರುಷರ ಜೋಡಿಗೆ ಕಂಚಿನ ಪದಕ
ಟೂರ್ನಿಯುದ್ದಕ್ಕೂ ಅಮೋಘ ಆಟವಾಡಿದ ಸಿದ್ದೇಶ್‌ ಪಾಂಡೆ–ಮಂದಿತ್ ದಾನಿ ಮತ್ತು ಫಿಡೆಲ್‌ ಸ್ನೇಹಿತ್–ಸುಧಾಂಶು ಗ್ರೋವರ್ ಜೋಡಿ ಪುರುಷರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ನಿರಾಸೆ ಕಂಡರು. ಈ ಮೂಲಕ ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಂಡರು.

ಮಹಾರಾಷ್ಟ್ರದವರಾದ ಸಿದ್ದೇಶ್ ಮತ್ತು ಮಂದಿತ್ ಅವರು ಸೌದಿ ಅರೆಬಿಯಾದ ಅಲಿ ಅಲ್ಖದ್ರಾವಿ ಮತ್ತು ಅಬ್ದುಲ್ ಅಜೀಜ್ ಶುಲೈಬಿ ಎದುರು 0–3ರಲ್ಲಿ ಸೋತರು. ಸ್ನೇಹಿತ್ ಮತ್ತು ಸುಧಾಂಶು 2–3ರಲ್ಲಿ ಕಜಕಸ್ತಾನದ ಅಲನ್ ಕುರ್ಮಂಗ್ಲಿಯೆವ್ ಹಾಗೂ ಕಿರಿಲ್ ಜೆರಸಿಮೆಂಕೊ ಜೋಡಿಗೆ ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.