ADVERTISEMENT

ಕೊಡವ ಕೌಟುಂಬಿಕ ಹಾಕಿ ಉತ್ಸವ: ಪೆಮ್ಮಡಿಯಂಡ ತಂಡಕ್ಕೆ ಗೆಲುವು

ಕೊಡವ ಕೌಟುಂಬಿಕ ಹಾಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 19:24 IST
Last Updated 19 ಮಾರ್ಚ್ 2023, 19:24 IST
ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ ಭಾನುವಾರ ನಡೆದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಪೆಮ್ಮಡಿಯಂಡ ತಂಡ ಮತ್ತು ಮಚ್ಚುರ ತಂಡಗಳು ಚೆಂಡಿಗಾಗಿ ಸೆಣಸಾಟ ನಡೆಸಿದವು
ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ ಭಾನುವಾರ ನಡೆದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಪೆಮ್ಮಡಿಯಂಡ ತಂಡ ಮತ್ತು ಮಚ್ಚುರ ತಂಡಗಳು ಚೆಂಡಿಗಾಗಿ ಸೆಣಸಾಟ ನಡೆಸಿದವು   

ನಾಪೋಕ್ಲು (ಕೊಡಗು ಜಿಲ್ಲೆ): ಪೆಮ್ಮಡಿಯಂಡ ತಂಡವು ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದ ಪಂದ್ಯದಲ್ಲಿ ಮಚ್ಚುರ ತಂಡದ ವಿರುದ್ಧ ರೋಚಕ ಜಯಸಾಧಿಸಿತು.

ಭಾನುವಾರ ನಡೆದ ಪಂದ್ಯದಲ್ಲಿ ಪೆಮ್ಮಡಿಯಂಡ ತಂಡವು 4–3 ಗೋಲುಗಳ ಅಂತರದಿಂದ ಮಚ್ಚುರ ತಂಡದ ವಿರುದ್ಧ ಗೆದ್ದಿತು. ಇನ್ನೊಂದು ಪಂದ್ಯದಲ್ಲಿ ಮೇವಡ ತಂಡವು ಬೊಳಿಯಾಡಿರ ತಂಡದ ವಿರುದ್ಧ 5 ಗೋಲು ಗಳಿಸಿ ಭರ್ಜರಿ ಗೆಲುವು ದಾಖಲಿಸಿತು.

ಇನ್ನುಳಿದ ಪಂದ್ಯಗಳಲ್ಲಿ; ಪುಟ್ಟಿಚಂಡ ತಂಡ 1–0ಯಿಂದ ಕಾಂಡಂಡ ತಂಡದ ವಿರುದ್ಧ; ಚೇರಂಡ 2–0ಯಿಂದ ಅಲ್ಲಾರಂಡ ಎದುರು ಜಯಿಸಿದರು. ಕಬ್ಬಚ್ಚಿರ 2-1 ಅಂತರದಿಂದ ಮೇಚಿಯಂಡ ತಂಡವನ್ನು, ಅಮ್ಮಂಡ ತಂಡವು 2-1 ಅಂತರದಿಂದ ಕೂಪದಿರ ತಂಡವನ್ನು, ಚೋಳಂಡ ತಂಡವು 1–0 ಅಂತರದಿಂದ ಕೋಚಮಂಡ ತಂಡವನ್ನು, ಬೊಳಕಾರಂಡ ತಂಡ 2-1ರಿಂದ ಮಚ್ಚಂಡ ತಂಡವನ್ನು, ಬಳ್ಳಂಡ 1-0 ಯಿಂದ ಪೊರ್ಕೊವಂಡ ತಂಡವನ್ನು ಸೋಲಿಸಿತು.

ADVERTISEMENT

ಆತಿಥೇಯ ಅಪ್ಪಚೆಟ್ಟೋಳಂಡ ತಂಡ, ಪುಲ್ಲೇರ, ಚೋಲಂಡ, ಕಲ್ಯಾಟಂಡ ಮತ್ತು ಕೋಲತಂಡ ತಂಡಗಳು ವಾಕ್ ಓವರ್ ಪಡೆದವು. ಮಾದೆಯಂಡ ಮತ್ತು ಕೋಣಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೋಣಿಯಂಡ ತಂಡವು ಟೈ ಬ್ರೇಕರ್‌ನಲ್ಲಿ ಗೆದ್ದಿತು.

ಚೊಟ್ಟಿಯಂಡ 2-0 ಅಂತರದಿಂದ ಅಲ್ಲಪ್ಪಿರ ತಂಡವನ್ನು, ಕರವಂಡ ತಂಡವು ಮುಕ್ಕಾಟಿರ (ಬೇತ್ರಿ) ತಂಡದ ವಿರುದ್ಧ 3-1ರಿಂದ, ಮಾಚಿಮಾಡ ತಂಡವು ಕುಂದಿರ ತಂಡದ ವಿರುದ್ಧ 3-0 ಅಂತರದಿಂದ ಗೆಲುವು ಸಾಧಿಸಿತು.

ಕೇಚೆಟ್ಟಿರ ತಂಡ ಪಾಸುರ ತಂಡದ ವಿರುದ್ಧ 3-0 ಅಂತರದಿಂದ, ಮಚ್ಚಾರಂಡ 3-0 ಅಂತರದಿಂದ ಕಾಟುಮಣಿಯಂಡ ತಂಡವನ್ನು, ಕೊಂಡಿರ ತಂಡ 2–1ರ ಅಂತರದಿಂದ ಗಂಡಂಗಡ ತಂಡವನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.