ADVERTISEMENT

ಬಿಲಿಯರ್ಡ್ಸ್‌: ಮಯಂಕ್ ಕಾರ್ತಿಕ್ ಹ್ಯಾಟ್ರಿಕ್

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 16:27 IST
Last Updated 1 ಸೆಪ್ಟೆಂಬರ್ 2021, 16:27 IST
ಮಯಂಕ್ ಕಾರ್ತಿಕ್
ಮಯಂಕ್ ಕಾರ್ತಿಕ್   

ಬೆಂಗಳೂರು: ಮಯಂಕ್ ಕಾರ್ತಿಕ್ ಬುಧವಾರ ನಡೆದ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಜೂನಿಯರ್ ಬಿಲಿಯರ್ಡ್ಸ್‌ ಪ್ರಶಸ್ತಿ ಜಯಿಸಿದರು. ಇದು ಅವರ ಮೂರನೇ ಪ್ರಶಸ್ತಿಯಾಗಿದೆ.

ಮಂಗಳವಾರ ಅವರು ಸ್ನೂಕರ್ ಪ್ರಶಸ್ತಿ ಗೆದ್ದರು. ಅದಕ್ಕೂ ಮುನ್ನ ಅವರು ಸಬ್‌ ಜೂನಿಯರ್ ಬಿಲಿಯರ್ಡ್ಸ್‌ನಲ್ಲಿ ಜಯಿಸಿದ್ದರು.

ಪಿ. ಕೀರ್ತನಾ ಜೂನಿಯರ್ ಬಾಲಕಿಯರ ಸ್ನೂಕರ್ ವಿಭಾಗದಲ್ಲಿ ಪ್ರಶಸ್ತಿ ಡಬಲ್ ಸಾಧನೆ ಮಾಡಿದರು. ಕೀರ್ತನಾ 54–05, 48–1ರಿಂದ ಹರ್ಷಿತಾ ಭಾವಿ ಎದುರು ಮತ್ತು 41–46, 54–02, 75–11ರಿಂದ ನತಾಶಾ ಚೇತನ್ ವಿರುದ್ಧ ಜಯಿಸಿದರು. ಅವರು ಬಿಲಿಯರ್ಡ್ಸ್‌ ಪ್ರಶಸ್ತಿ ಕೂಡ ಗೆದ್ದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.