ADVERTISEMENT

ದೇಶವಿಭಜನೆ ಬೆಂಕಿಯಿಂದೆದ್ದು ಬಂದ ಪ್ರತಿಭೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 22:04 IST
Last Updated 19 ಜೂನ್ 2021, 22:04 IST
   

ಬೆಂಗಳೂರು: ಕ್ರೀಡಾಲೋಕದ ದಂತಕಥೆ ಮಿಲ್ಖಾ ಸಿಂಗ್ ಹದಿಹರೆಯದಲ್ಲಿ ಅನುಭವಿಸಿದ ನೋವು ಸಣ್ಣದಲ್ಲ. 1947ರಲ್ಲಿ ಸ್ವಾತಂತ್ರ್ಯ ಬಂದಾಗ ದೇಶವೂ ವಿಭಜನೆಯಾಗಿತ್ತು.

ಆ ಸಂದರ್ಭದಲ್ಲಿ ಪಂಜಾಬ್‌ನಲ್ಲಿ ನಡೆದ ದಂಗೆಗಳಲ್ಲಿ ಮಿಲ್ಖಾಸಿಂಗ್ ಅವರ ತಂದೆ, ತಾಯಿ ಮತ್ತು ಸಂಬಂಧಿಗಳನ್ನು ಕಗ್ಗೊಲೆ ಮಾಡಲಾಯಿತು. ಅವುಗಳನ್ನು ಕಣ್ಣಾರೆ ಕಂಡಿದ್ದ ಮಿಲ್ಖಾ ದಂಗೆಕೋರರಿಂದ ತಪ್ಪಿಸಿಕೊಂಡು ದೆಹಲಿ ಸೇರಿದ್ದರು. ಅವರ ತವರೂರು ಗೋವಿಂದಪುರ ಪಾಕಿಸ್ತಾನಕ್ಕೆ ಸೇರಿತು. ಹೆಣಗಳ ರಾಶಿ ತುಂಬಿದ್ದ ರೈಲಿನಲ್ಲಿ ದೆಹಲಿ ಸೇರಿದ ಮಿಲ್ಖಾ ನಿರಾಶ್ರಿತರ ಶಿಬಿರದಲ್ಲಿ ಅನುಭವಿಸಿದ ಸಂಕಷ್ಟಗಳಿಗೆ ಲೆಕ್ಕವೇ ಇಲ್ಲ.

ಈ ಎಲ್ಲ ಕಷ್ಟಗಳನ್ನು ದಾಟಿಕೊಂಡು ಬಂದು ಸೇನೆ ಸೇರಿದ್ದರು. ಅಲ್ಲಿ ಅವರ ಜೀವನ ಬದಲಾಯಿತು. ಕ್ರಾಸ್ ಕಂಟ್ರಿ ಓಟದಲ್ಲಿ ತೋರಿದ ಪ್ರತಿಭೆ ರಕ್ಷಣೆಯಾಯಿತು. ಕೋಚ್‌ಗಳ ಕಣ್ಣಿಗೆ ಬಿದ್ದ ಮಿಲ್ಖಾ ದೊಡ್ಡ ಅಥ್ಲೀಟ್ ಆಗಿ ಬೆಳೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.