ADVERTISEMENT

ಪಿಕೆಎಲ್‌ ಹರಾಜು ಪ್ರಕ್ರಿಯೆ: 190 ಆಟಗಾರರಿಗೆ ₹ 48 ಕೋಟಿ ಖರ್ಚು

ಪಿಟಿಐ
Published 1 ಸೆಪ್ಟೆಂಬರ್ 2021, 19:41 IST
Last Updated 1 ಸೆಪ್ಟೆಂಬರ್ 2021, 19:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಎಂಟನೇ ಆವೃತ್ತಿಗೆ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು,ಒಟ್ಟು 190 ಆಟಗಾರರು 12 ಫ್ರಾಂಚೈಸ್‌ಗಳ ಪಾಲಾಗಿದ್ದಾರೆ. ಎಲ್ಲ ಆಟಗಾರರಿಗೆ ಸೇರಿ ಫ್ರಾಂಚೈಸ್‌ಗಳು ಒಟ್ಟು ₹ 48.22 ಕೋಟಿ ಖರ್ಚು ಮಾಡಿವೆ ಎಂದು ಆಯೋಜಕರು ಬುಧವಾರ ತಿಳಿಸಿದ್ದಾರೆ.

ರೈಡರ್ ಪ್ರದೀಪ್ ನರ್ವಾಲ್‌ ಅವರನ್ನು ಅತಿಹೆಚ್ಚು ಬೆಲೆಗೆ(1.65 ಕೋಟಿ) ಯುಪಿ ಯೋಧಾ ತನ್ನದಾಗಿಸಿಕೊಂಡಿತ್ತು. ಬೆಂಗಳೂರು ಬುಲ್ಸ್ ತಂಡವು ಚಂದ್ರನ್ ರಂಜೀತ್ ಅವರನ್ನು ₹ 84 ಲಕ್ಷ ಮೊತ್ತಕ್ಕೆ ಪಡೆದುಕೊಂಡಿತು. ಅರ್ಜುನ್‌ ದೇಸ್ವಾಲ್‌ ₹ 96 ಲಕ್ಷಕ್ಕೆ ಜೈಪುರ ಪಿಂಕ್ ಪ್ಯಾಂಥರ್ಸ್ ಪಾಲಾದರು. ಪುಣೇರಿ ಪಲ್ಟನ್‌ ತಂಡವು ನಿತಿನ್ ತೋಮರ್ (₹ 61 ಲಕ್ಷ) ಅವರನ್ನು ತನ್ನಲ್ಲೇ ಉಳಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT