ADVERTISEMENT

ರಾಷ್ಟ್ರೀಯ ಕಾರ್ಟಿಂಗ್: ರುಹಾನ್‌, ರೋಹನ್‌, ನಿಖಿಲೇಶ್‌ಗೆ ಪ್ರಶಸ್ತಿ

ಪಿಟಿಐ
Published 21 ಸೆಪ್ಟೆಂಬರ್ 2021, 16:56 IST
Last Updated 21 ಸೆಪ್ಟೆಂಬರ್ 2021, 16:56 IST

ಬೆಂಗಳೂರು: ನಗರದ ರೇಸರ್‌ಗಳಾದ ರುಹಾನ್‌ ಆಳ್ವ, ರೋಹನ್ ಮಾದೇಶ್ ಮತ್ತು ನಿಖಿಲೇಶ್ ರಾಜು ಅವರು ಈಚೆಗೆ ನಡೆದ ಮೆಕೊ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ಕಾರ್ಟಿಂಗ್‌ನಲ್ಲಿ ವಿವಿಧ ವಿಭಾಗಗಳ ಪ್ರಶಸ್ತಿ ಗೆದ್ದುಕೊಂಡರು.

ಸೀನಿಯರ್ ವಿಭಾಗದಲ್ಲಿ ಅಮೋಘ ಸಾಮರ್ಥ್ಯ ತೋರಿದ ರುಹಾನ್‌ ಅವರು ಎನ್‌ಸಿ ರೇಸಿಂಗ್‌ ಎಂಸ್ಪೋರ್ಟ್‌ x30 ಇಂಡಿಯಾ ಕ್ಲಾಸ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಜೂನಿಯರ್ ವಿಭಾಗದ ಪ್ರಶಸ್ತಿ ರೋಹನ್ ಅವರ ಪಾಲಾದರೆ ನಿಖಿಲೇಶ್ ರಾಜು ಅವರು ಕೆಡೆಟ್ ವಿಭಾಗದ ಚಾಂಪಿಯನ್ ಆದರು. ರೋಹನ್ ಮತ್ತು ನಿಖಿಲೇಶ್ ಪ್ರತಿಸ್ಪರ್ಧಿಗಳ ಕಠಿಣ ಸವಾಲು ಮೆಟ್ಟಿನಿಂತು ಗಮನ ಸೆಳೆದರು.

15 ವರ್ಷದ ರುಹಾನ್ ಐದು ಸುತ್ತುಗಳಲ್ಲೂ ಮೆಚ್ಚುಗೆಯ ಆಟವಾಡಿ 167 ಪಾಯಿಂಟ್ ಕಲೆ ಹಾಕಿದರು. ಎರಡು, ಮೂರು ಮತ್ತು ನಾಲ್ಕನೇ ಸುತ್ತುಗಳಲ್ಲಿ ತಲಾ ನಾಲ್ಕು ರೇಸ್‌ಗಳಲ್ಲಿ ಆಧಿಪತ್ಯ ಸ್ಥಾಪಿಸಿದ್ದು ಅವರು ಪ್ರಶಸ್ತಿ ಗಳಿಸಲು ನೆರವಾಯಿತು. ಕೊನೆಯ ಸುತ್ತಿನಲ್ಲಿ ಒಂದು ಪ್ರಮಾದ ಎಸಗಿದರು.

ADVERTISEMENT

ಜೂನಿಯರ್ ವಿಭಾಗದಲ್ಲಿ ರೋಹನ್ 146 ಪಾಯಿಂಟ್ ಗಳಿಸಿದರು. 134 ಪಾಯಿಂಟ್ ಗೆದ್ದ ಜೇಡನ್ ಪರಿಯತ್ ಮತ್ತು 130 ಪಾಯಿಂಟ್ ಗಳಿಸಿದ ಸಹೋದರ ಇಶಾನ್ ಅವರಿಂದ ರೋಹನ್‌ಗೆ ಪ್ರಬಲ ಸ್ಪರ್ಧೆ ಎದುರಾಗಿತ್ತು.

ಸೀನಿಯರ್ ವಿಭಾಗದ ಎರಡನೇ ಸ್ಥಾನ ಸ್ಥಳೀಯ ರೇಸರ್ ನಿಗೆಲ್ ಥಾಮಸ್ ಗೆದ್ದುಕೊಂಡರು. ನಿರ್ಮಲ್ ಉಮಾಶಂಕರ್‌ ಅವರಿಗೆ ಮೂರನೇ ಸ್ಥಾನ ಲಭಿಸಿತು. ಜೂನಿಯರ್ ವಿಭಾಗದ ಎರಡನೇ ಸ್ಥಾನ ಗುವಾಹಟಿಯ ಜೇಡನ್ ಪರಿಯತ್ ಪಾಲಾದರೆ ಬೆಂಗಳೂರಿನ ಇಶಾನ್ ಮಾದೇಶ್ ಮೂರನೇ ಸ್ಥಾನ ಗಳಿಸಿದರು. ಪುಣೆಯ ಅರಾಫತ್ ಶೇಕ್ ಮತ್ತು ಬೆಂಗಳೂರಿನ ಜರಾ ಮಿಶ್ರಾ ಅವರು ಕೆಡೆಟ್ ವಿಭಾಗದಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.