ADVERTISEMENT

ಪ್ಯಾರಾಲಿಂಪಿಕ್ಸ್:‌ ಹೈ ಜಂಪ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ನಿಶಾದ್‌ ಕುಮಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಆಗಸ್ಟ್ 2021, 12:47 IST
Last Updated 29 ಆಗಸ್ಟ್ 2021, 12:47 IST
ನಿಶಾದ್‌ ಕುಮಾರ್‌
ನಿಶಾದ್‌ ಕುಮಾರ್‌   

ಟೋಕಿಯೊ: ಜಪಾನ್‌ನಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಎತ್ತರ ಜಿಗಿತ ಸ್ಪರ್ಧೆಯಲ್ಲಿಭಾರತದ ನಿಶಾದ್‌ ಕುಮಾರ್‌ ಅವರು ಬೆಳ್ಳಿಪದಕ ಗೆದ್ದುಕೊಂಡಿದ್ದಾರೆ.

ಹಿಮಾಚಲ ಪ್ರದೇಶದ ಊನಾ ಜಿಲ್ಲೆಯವರಾದ20 ವರ್ಷದ ನಿಶಾದ್‌,2009ರಿಂದಲೂಪ್ಯಾರಾ ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಎಂಟನೇ ವಯಸ್ಸಿನಲ್ಲಿದ್ದಾಗ ಅಪಘಾತಕ್ಕೀಡಾಗಿಬಲಗೈ ಕಳೆದುಕೊಂಡಿದ್ದರು. ದುಬೈನಲ್ಲಿ2019ರಲ್ಲಿ ನಡೆದವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅಮೋಘ ಪ್ರದರ್ಶನದೊಂದಿಗೆ ಕಂಚಿನ ಪದಕ ಗೆದ್ದಿದ್ದರು.

ನಿಶಾದ್‌ ವೈಯಕ್ತಿಕ ಶ್ರೇಷ್ಠ2.06 ಮೀಟರ್‌ ಎತ್ತರ ಜಿಗಿದರು.ಅಮೆರಿಕದವರಾದ ರೋಡೆರಿಕ್ ಟೌನ್ಸೆಂಡ್, ಡಲ್ಲಾಸ್‌ ವೈಸ್‌ ಅವರು ಕ್ರಮವಾಗಿ2.15 ಮೀಟರ್‌ ಮತ್ತು2.06 ಮೀಟರ್‌ ಎತ್ತರ ಜಿಗಿದು ಚಿನ್ನಹಾಗೂ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ADVERTISEMENT
ನಿಶಾದ್‌ ಜಿಗದ ಪರಿ

ಇದೇ ದಿನ ಭಾವಿನಾ ಪಟೇಲ್‌ ಅವರು ಟೇಬಲ್‌ ಟೆನಿಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.