ADVERTISEMENT

Paralympics: ಚಿನ್ನ ಗೆದ್ದ ಸುಮಿತ್‌ಗೆ ಹರಿಯಾಣ ಸರ್ಕಾರದಿಂದ ₹6 ಕೋಟಿ ಬಹುಮಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಆಗಸ್ಟ್ 2021, 15:34 IST
Last Updated 30 ಆಗಸ್ಟ್ 2021, 15:34 IST
ಸುಮಿತ್‌ ಅಂತಿಲ್‌
ಸುಮಿತ್‌ ಅಂತಿಲ್‌   

ಟೋಕಿಯೊ: ಪ್ಯಾರಾಲಿಂಪಿಕ್ಸ್‌ನ ಜಾವೆಲಿನ್‌ ಥ್ರೋನಲ್ಲಿ ಚಿನ್ನ ಗೆದ್ದಿರುವ ಭಾರತದ ಸುಮಿತ್‌ ಅಂತಿಲ್‌ ಅವರಿಗೆ ಹರಿಯಾಣ ಸರ್ಕಾರವು ₹6 ಕೋಟಿ ಬಹುಮಾನ ಮತ್ತು ಸರ್ಕಾರಿ ನೌಕರಿ ನೀಡುವುದಾಗಿ ಘೋಷಿಸಿದೆ.

ಪುರುಷರ ‘ಎಫ್‌ 56’ ವಿಭಾಗದ ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದಿರುವ ಯೋಗೇಶ್ ಕಥೂನಿಯಾ ಅವರಿಗೆ ₹4 ಕೋಟಿ ಬಹುಮಾನ ಮತ್ತು ಸರ್ಕಾರಿ ನೌಕರಿ ನೀಡುವುದಾಗಿ ಹರಿಯಾಣ ಸರ್ಕಾರ ತಿಳಿಸಿದೆ.

23 ವರ್ಷದ ಸುಮಿತ್‌ ಹರಿಯಾಣದ ಸೋನಿಪತ್‌ನವರು. 2015ರಲ್ಲಿ ಸಂಭವಿಸಿದ ಮೋಟರ್‌ಬೈಕ್‌ ಅಪಘಾತದಲ್ಲಿ ಎಡಗಾಲು ಕಳೆದುಕೊಂಡಿದ್ದರು. ಅವರು ತಮ್ಮ ಐದನೇ ಪ್ರಯತ್ನದಲ್ಲಿ ಬರೋಬ್ಬರಿ 68.55 ಮೀಟರ್‌ ದೂರ ಜಾವೆಲಿನ್‌ ಎಸೆದು ತಮ್ಮದೇ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಈ ಹಿಂದೆ ಅವರು 62.88 ಮೀಟರ್‌ ದೂರ ಜಾವೆಲಿನ್ ಎಸೆದು ದಾಖಲೆ ನಿರ್ಮಿಸಿದ್ದರು.

ADVERTISEMENT

ಡಿಸ್ಕಸ್ ಥ್ರೋದಲ್ಲಿ ಬೆಳ್ಳಿ ವಿಜೇತರಾಗಿರುವ ಯೋಗೇಶ್ ಕಥೂನಿಯಾ ಹರಿಯಾಣದವರೇ ಆಗಿದ್ದಾರೆ. ತಮ್ಮ ಕೊನೆಯ ಮತ್ತು ಆರನೇ ಯತ್ನದಲ್ಲಿ ಡಿಸ್ಕಸ್ ಅನ್ನು 44.38 ಮೀ ದೂರ ಎಸೆದಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.