ADVERTISEMENT

ಪ್ಯಾರಾಲಿಂಪಿಕ್ಸ್:‌ ವಿನೋದ್‌ ಕುಮಾರ್‌ಗೆ ಕಂಚು; ಭಾರತಕ್ಕೆ ಭಾನುವಾರ ಮೂರನೇ ಪದಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಆಗಸ್ಟ್ 2021, 13:34 IST
Last Updated 29 ಆಗಸ್ಟ್ 2021, 13:34 IST
ವಿನೋದ ಕುಮಾರ್‌ (ಚಿತ್ರ -ರಾಹುಲ್‌ ಗಾಂಧಿ ಟ್ವಿಟರ್‌ ಖಾತೆಯಿಂದ)
ವಿನೋದ ಕುಮಾರ್‌ (ಚಿತ್ರ -ರಾಹುಲ್‌ ಗಾಂಧಿ ಟ್ವಿಟರ್‌ ಖಾತೆಯಿಂದ)   

ಟೋಕಿಯೊ:ಜಪಾನ್‌ನಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿಭಾರತದವಿನೋದ್‌ ಕುಮಾರ್ ಅವರುಕಂಚಿನ ಪದಕ ಗೆದ್ದುಕೊಂಡಿದ್ದಾರೆ.‌ ಇದರೊಂದಿಗೆ ಭಾರತಕ್ಕೆಭಾನುವಾರ ಒಟ್ಟು ಮೂರು ಪದಕಗಳು ಬಂದಂತಾಗಿದೆ.

19.91 ಮೀಟರ್‌ ದೂರ ಎಸೆದು ಪದಕ್ಕೆ ಕೊರಳೊಡ್ಡಿದ್ದೂ ಮಾತ್ರವಲ್ಲದೆ ಏಷಿಯನ್‌ ದಾಖಲೆಯನ್ನೂ ನಿರ್ಮಿಸಿದರು. ಪೋಲೆಂಡ್‌ನ ಪಿಯೋಟರ್‌ ಕೊಸೆವಿಕ್ಜ್‌ (20.02ಮೀ), ಕ್ರೊವೇಷಿಯಾದ ವೆಲಿಮಿರ್‌ ಸ್ಯಾಂಡೊರ್‌ (19.98ಮೀ) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಬಾಚಿಕೊಂಡರು.

ಇದೇ ದಿನ ಟೇಬಲ್‌ ಟೆನಿಸ್‌ ಸ್ಪರ್ಧೆಯಲ್ಲಿ ಭಾವಿನಾ ಬೆನ್‌ ಪಟೇಲ್‌ಮತ್ತು ಎತ್ತರ ಜಿಗಿತ ಸ್ಪರ್ಧೆಯಲ್ಲಿ ನಿಶಾದ್‌ ಕುಮಾರ್‌ ಬೆಳ್ಳಿ ಪದಕ ಗೆದ್ದಿದ್ದಾರೆ ಎಂಬುದು ವಿಶೇಷ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.