ADVERTISEMENT

ರಾಜ್ಯಮಟ್ಟದ ವಾಲಿಬಾಲ್‌: ಮೈಸೂರು ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 19:09 IST
Last Updated 25 ಜನವರಿ 2023, 19:09 IST
ಮೈಸೂರು ವಿಶ್ವವಿದ್ಯಾಲಯದ ಸ್ಫೋರ್ಟ್ಸ್‌ ಪೆವಿಲಿಯನ್‌ನಲ್ಲಿ ಬುಧವಾರ ಆರಂಭವಾದ ರಾಜ್ಯಮಟ್ಟದ 25ನೇ ವಾಲಿಬಾಲ್‌ ಚಾಂಪಿಯನ್‌ಷಿಪ್‌ನ ಉದ್ಘಾಟನಾ ಪಂದ್ಯದಲ್ಲಿ ಉತ್ತರಕನ್ನಡ ಹಾಗೂ ಮೈಸೂರು ತಂಡದ ಪೈಪೋಟಿ –ಪ್ರಜಾವಾಣಿ ಚಿತ್ರ
ಮೈಸೂರು ವಿಶ್ವವಿದ್ಯಾಲಯದ ಸ್ಫೋರ್ಟ್ಸ್‌ ಪೆವಿಲಿಯನ್‌ನಲ್ಲಿ ಬುಧವಾರ ಆರಂಭವಾದ ರಾಜ್ಯಮಟ್ಟದ 25ನೇ ವಾಲಿಬಾಲ್‌ ಚಾಂಪಿಯನ್‌ಷಿಪ್‌ನ ಉದ್ಘಾಟನಾ ಪಂದ್ಯದಲ್ಲಿ ಉತ್ತರಕನ್ನಡ ಹಾಗೂ ಮೈಸೂರು ತಂಡದ ಪೈಪೋಟಿ –ಪ್ರಜಾವಾಣಿ ಚಿತ್ರ   

ಮೈಸೂರು: ಸಚಿನ್‌ ಅವರ ಉತ್ತಮ ಆಟದ ನೆರವಿನಿಂದ ಆತಿಥೇಯ ಮೈಸೂರು ತಂಡದವರು ರಾಜ್ಯಮಟ್ಟದ 25ನೇ ವಾಲಿಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು.

ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸ್ಫೋರ್ಟ್ಸ್‌ ಪೆವಿಲಿಯನ್‌ನಲ್ಲಿ ಬುಧವಾರ ಆರಂಭವಾದ ಚಾಂಪಿಯನ್‌ಷಿಪ್‌ನ ಉದ್ಘಾಟನಾ ಪಂದ್ಯದಲ್ಲಿ ಮೈಸೂರು ತಂಡವು 27–25, 25–23ರಿಂದ ಉತ್ತರ ಕನ್ನಡ ತಂಡವನ್ನು ಮಣಿಸಿತು.

ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಸಚಿನ್ ಅತ್ಯತ್ತಮ ಸರ್ವ್‌, ಬ್ಲಾಕಿಂಗ್‌ ಹಾಗೂ ಪಾಸಿಂಗ್‌ ಮೂಲಕ ಮೈಸೂರಿಗೆ ಪಾಯಿಂಟ್ಸ್‌ ಹೆಚ್ಚಿಸಿಕೊಟ್ಟರು. 45 ನಿಮಿಷಗಳ ಹಣಾಹಣಿಯಲ್ಲಿ ಉತ್ತರ ಕನ್ನಡದ ಮಾರುತಿ ಜಿ.ನಾಯಕ್ ಕೂಡ ಗಮನ ಸೆಳೆದರು.

ADVERTISEMENT

ಇನ್ನುಳಿದ ‍ಪಂದ್ಯದಲ್ಲಿ ಹಾವೇರಿ 22–25, 25–20, 22–20ರಿಂದ ಚಿಕ್ಕೋಡಿ ಎದುರು, ಚಿಕ್ಕಬಳ್ಳಾಪುರ 27–25, 23–25, 17–15ರಿಂದ ಗದಗ ತಂಡದ ಎದುರು ಜಯ ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.