ADVERTISEMENT

‘ಈ ಚಿನ್ನ ಫೆಡರರ್‌ಗೆ ಅರ್ಪಣೆ’

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 8:17 IST
Last Updated 1 ಆಗಸ್ಟ್ 2021, 8:17 IST
ಹಾಪ್‌ಮನ್‌ ಕಪ್‌ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಜೊತೆಯಾಗಿ ಆಡಿ ಪ್ರಶಸ್ತಿ ಗೆದ್ದಿದ್ದ ಫೆಡರರ್‌ ಮತ್ತು ಬೆಲಿಂಡಾ ಬಳಿಕ ಟ್ರೋಫಿಗೆ ಮುತ್ತಿಟ್ಟಿದ್ದ ಕ್ಷಣ
ಹಾಪ್‌ಮನ್‌ ಕಪ್‌ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಜೊತೆಯಾಗಿ ಆಡಿ ಪ್ರಶಸ್ತಿ ಗೆದ್ದಿದ್ದ ಫೆಡರರ್‌ ಮತ್ತು ಬೆಲಿಂಡಾ ಬಳಿಕ ಟ್ರೋಫಿಗೆ ಮುತ್ತಿಟ್ಟಿದ್ದ ಕ್ಷಣ   

ಟೋಕಿಯೊ (ಎಪಿ): ಸ್ವಿಟ್ಜರ್ಲೆಂಡ್‌ನ ಟೆನಿಸ್‌ ಆಟಗಾರ್ತಿ ಬೆಲಿಂಡಾ ಬೆನ್‌ಸಿಚ್‌, ಒಲಿಂಪಿಕ್ಸ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಗೆದ್ದ ಚಿನ್ನದ ಪದಕವನ್ನು ರೋಜರ್‌ ಫೆಡರರ್‌ಗೆ ಅರ್ಪಿಸಿದ್ದಾರೆ.

ಬೆಲಿಂಡಾ ಅವರು ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ ಸ್ವಿಟ್ಜರ್ಲೆಂಡ್‌ನ ಮೊದಲ ಆಟಗಾರ್ತಿ ಎನಿಸಿದ್ದಾರೆ. ಫೆಡರರ್‌, ಸ್ಟಾನಿಸ್ಲಾಸ್‌ ವಾವ್ರಿಂಕ ಮತ್ತು ಮಾರ್ಟಿನಾ ಹಿಂಗಿಸ್‌ ಅವರಿಂದ ಆಗದ್ದನ್ನು ಬೆಲಿಂಡಾ ಸಾಧಿಸಿದ್ದಾರೆ. ಹೀಗಾಗಿ ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

‘ಫೆಡರರ್‌ ಅವರು ಶನಿವಾರ ಬೆಳಿಗ್ಗೆ ಸಂದೇಶವೊಂದನ್ನು ಕಳುಹಿಸಿದ್ದರು. ನಿನ್ನ ಕನಸನ್ನು ಸಾಕಾರಗೊಳಿಸಿಕೊಳ್ಳಲು ಇದು ಸರಿಯಾದ ಸಮಯ. ಈ ಅವಕಾಶವನ್ನು ಕಳೆದುಕೊಳ್ಳಬೇಡ ಎಂದು ಬರೆದಿದ್ದರು. ಅವರ ಮಾತುಗಳು ಸರಿ ಅನಿಸಿತು. ಆ ಸಂದೇಶ ಓದಿದ ಬಳಿಕ ನನ್ನಲ್ಲಿ ಹೊಸ ಹುರುಪು ಮೂಡಿತ್ತು’ ಎಂದು ಬೆಲಿಂಡಾ ಹೇಳಿದ್ದಾರೆ.

ADVERTISEMENT

‘ಫೆಡರರ್‌ ಬದುಕು ನಮಗೆಲ್ಲಾ ಸ್ಫೂರ್ತಿ. ಅವರು ಅಗಾಧ ಸಾಧನೆ ಮಾಡಿದ್ದಾರೆ. ಹೀಗಿದ್ದರೂ ಕೊಂಚವೂ ಅಹಂ ಇಲ್ಲ. ನಮ್ಮಂತಹ ಯುವ ಕ್ರೀಡಾಪಟುಗಳಿಗೆ ಸದಾ ಬೆಂಬಲವಾಗಿ ನಿಲ್ಲುತ್ತಾರೆ. ಈ ಗೆಲುವು ಹಾಗೂ ಚಿನ್ನದ ಪದಕ ಅವರಿಗೇ ಸೇರಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.