ADVERTISEMENT

ಫ್ರೆಂಚ್‌ ಓಪನ್‌: ಫೈನಲ್‌ಗೆ ಸಿಟ್ಸಿಪಾಸ್‌

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 20:03 IST
Last Updated 11 ಜೂನ್ 2021, 20:03 IST
ಸಿಟ್ಸಿಪಾಸ್– ರಾಯಿಟರ್ಸ್ ಚಿತ್ರ
ಸಿಟ್ಸಿಪಾಸ್– ರಾಯಿಟರ್ಸ್ ಚಿತ್ರ   

ಪ್ಯಾರಿಸ್‌: ಅಮೋಘ ಆಟವಾಡಿದ ಸ್ಟೆಫಾನೊಸ್ ಸಿಟ್ಸಿಪಾಸ್ ಅವರು ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಮಣಿಸಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ ಪಂದ್ಯದ ಐದು ಸೆಟ್‌ಗಳ ಹೋರಾಟದಲ್ಲಿ ಗೆದ್ದ ಗ್ರೀಸ್ ಆಟಗಾರ, ಮೊದಲ ಬಾರಿ ಗ್ರ್ಯಾನ್‌ ಸ್ಲಾಮ್‌ವೊಂದರ ಪ್ರಶಸ್ತಿ ಸುತ್ತು ತಲುಪಿದರು.

ಫಿಲಿಪ್ ಚಾಟ್ರಿಯರ್ ಅಂಗಣದಲ್ಲಿ, ಮೂರೂವರೆ ತಾಸು ನಡೆದ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಸಿಟ್ಸಿಪಾಸ್‌ 6-3, 6-3, 4-6, 4-6, 6-3ರಿಂದ ಜರ್ಮನಿ ಆಟಗಾರನನ್ನು ಸೋಲಿಸಿದರು. ಭಾನುವಾರ ಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ ಅಥವಾ ಜೊಕೊವಿಚ್ ಅವರನ್ನು ಸಿಟ್ಸಿಪಾಸ್ ಎದುರಿಸುವರು.

ಶನಿವಾರ ನಡೆಯುವ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ರಷ್ಯಾದ ಅನಸ್ತೇಸಿಯಾ ಪೌಲಿಚೆಂಕೋವಾ ಮತ್ತುಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಸಿಕೋವಾ ಸೆಣಸುವರು. ಗುರುವಾರ ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಅನ ಸ್ತೇಸಿಯಾ, ಸ್ಲೊವೇನಿಯಾದ ತಮಾರ ಜಿಡಾನ್ಸೆಕ್‌ ವಿರುದ್ಧ 7-5, 6-3ರಲ್ಲಿ ಜಯ ಗಳಿಸಿದರೆ, ಕ್ರೆಸಿಕೋವಾ, ಗ್ರೀಸ್‌ನ ಮರಿಯಾ ಸಕರಿ ಎದುರು 7–5, 4–6, 9–7ರಿಂದ ಗೆದ್ದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.