ADVERTISEMENT

ಕ್ಲೀವ್‌ಲ್ಯಾಂಡ್‌ ಟೆನಿಸ್ ಟೂರ್ನಿ: ಸಾನಿಯಾ–ಕ್ರಿಸ್ಟಿನಾ ರನ್ನರ್‌ಅಪ್‌

ಪಿಟಿಐ
Published 29 ಆಗಸ್ಟ್ 2021, 13:30 IST
Last Updated 29 ಆಗಸ್ಟ್ 2021, 13:30 IST
ಸೆಮಿಫೈನಲ್‌ನಲ್ಲಿ ಗೆದ್ದ ಬಳಿಕ ಭಾರತದ ಸಾನಿಯಾ ಮಿರ್ಜಾ (ಎಡ) ಹಾಗೂ ಅಮೆರಿಕದ ಕ್ರಿಸ್ಟಿನಾ ಮೆಕಾಲೆ ಅವರು ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ವೇಳೆ ಸಾನಿಯಾ ಪುತ್ರ ಇಜಾನ್‌ ಜೊತೆಗಿದ್ದರು– ಎಎಫ್‌ಪಿ ಚಿತ್ರ
ಸೆಮಿಫೈನಲ್‌ನಲ್ಲಿ ಗೆದ್ದ ಬಳಿಕ ಭಾರತದ ಸಾನಿಯಾ ಮಿರ್ಜಾ (ಎಡ) ಹಾಗೂ ಅಮೆರಿಕದ ಕ್ರಿಸ್ಟಿನಾ ಮೆಕಾಲೆ ಅವರು ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ವೇಳೆ ಸಾನಿಯಾ ಪುತ್ರ ಇಜಾನ್‌ ಜೊತೆಗಿದ್ದರು– ಎಎಫ್‌ಪಿ ಚಿತ್ರ   

ಕ್ಲೀವ್‌ಲ್ಯಾಂಡ್‌, ಅಮೆರಿಕ: ಟೂರ್ನಿಯುದ್ದಕ್ಕೂ ಅಮೋಘ ಆಟವಾಡಿದ್ದ ಭಾರತದ ಸಾನಿಯಾ ಮಿರ್ಜಾ– ಅಮೆರಿಕದ ಕ್ರಿಸ್ಟಿನಾ ಮೆಕಾಲೆ ಫೈನಲ್‌ನಲ್ಲಿ ಎಡವಿದರು. ಇಲ್ಲಿ ನಡೆದ ಡಬ್ಲ್ಯುಟಿಎ 250 ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ರನ್ನರ್‌ ಅಪ್ ಸ್ಥಾನ ಗಳಿಸಿದರು.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸಾನಿಯಾ–ಕ್ರಿಸ್ಟಿನಾ 5–7, 3–6ರಿಂದ ಜಪಾನ್‌ನ ಶುಕೊ ಓಯಮಾ– ಈನಾ ಶಿಬಹಾರ ವಿರುದ್ಧ ಸೋತರು. ಒಂದು ತಾಸು 24 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು.

ಸಾನಿಯಾ ಅವರಿಗೆ ಇದು ಈ ಋತುವಿನ ಮೊದಲ ಫೈನಲ್‌ ಪಂದ್ಯವಾಗಿತ್ತು. 180 ರ‍್ಯಾಂಕಿಂಗ್ ಪಾಯಿಂಟ್ಸ್‌ ಗಳಿಸುವದರೊಂದಿಗೆ ₹ 2 ಲಕ್ಷ 20 ಸಾವಿರ ಬಹುಮಾನವಾಗಿ ಅವರು ಪಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.