ADVERTISEMENT

ಕ್ವಾರ್ಟರ್‌ಫೈನಲ್‌ಗೆ ಸಾನಿಯಾ– ಕ್ರಿಸ್ಟಿನಾ

ಕ್ಲೀವ್‌ಲ್ಯಾಂಡ್‌ ಟೆನಿಸ್‌ ಚಾಂಪಿಯನ್‌ಷಿಪ್‌

ಪಿಟಿಐ
Published 23 ಆಗಸ್ಟ್ 2021, 14:40 IST
Last Updated 23 ಆಗಸ್ಟ್ 2021, 14:40 IST
ಸಾನಿಯಾ ಮಿರ್ಜಾ– ಪಿಟಿಐ ಚಿತ್ರ
ಸಾನಿಯಾ ಮಿರ್ಜಾ– ಪಿಟಿಐ ಚಿತ್ರ   

ಕ್ಲೀವ್‌ಲ್ಯಾಂಡ್‌, ಅಮೆರಿಕ : ಭಾರತದ ಸಾನಿಯಾ ಮಿರ್ಜಾ ಹಾಗೂ ಅಮೆರಿಕದ ಕ್ರಿಸ್ಟಿನಾ ಮೆಕಾಲೆ ಜೋಡಿಯು ಕ್ಲೀವ್‌ಲ್ಯಾಂಡ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

ಭಾನುವಾರ ರಾತ್ರಿ ಇಲ್ಲಿ ನಡೆದ ಮಹಿಳಾ ಡಬಲ್ಸ್ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಈ ಜೋಡಿಯು 6-3 6-2ರಿಂದ ಜಾರ್ಜಿಯಾದ ಒಕ್ಸಾನಾ ಕಲಾಶ್ನಿಕೊವಾ ಮತ್ತು ರುಮೇನಿಯಾದ ಆ್ಯಂಡ್ರಿಯಾ ಮಿಟು ಜೋಡಿಯನ್ನು ಪರಾಭವಗೊಳಿಸಿದರು.

ಭಾರತ ಮತ್ತು ಅಮೆರಿಕ ಆಟಗಾರ್ತಿಯರು ಎರಡೂ ಸೆಟ್‌ಗಳಲ್ಲಿ ಸಂಪೂರ್ಣ ಪಾರಮ್ಯ ಮೆರೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.