ADVERTISEMENT

ರೋಟರಿ: ನಾಗೇಂದ್ರ ಪ್ರಸಾದ್‌ ಗವರ್ನರ್‌

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 15:34 IST
Last Updated 29 ಜೂನ್ 2020, 15:34 IST
ನಿಕಟಪೂರ್ವ ಗವರ್ನರ್ ಸಮೀರ್ ಹರಿಯಾನಿ ಅವರಿಂದ (ಎಡದಿಂದ ಮೂರನೆಯವರು) ಬಿ.ಎಲ್.ನಾಗೇಂದ್ರ ಪ್ರಸಾದ್ ಅಧಿಕಾರ ಸ್ವೀಕರಿಸಿದರು. ಸಂಸದೆ ಸುಮಲತಾ ಅಂಬರೀಷ್, ರೂಪಾ ಹರಿಯಾನಿ, ಮೀರಾ ನಾಗೇಂದ್ರ ಪ್ರಸಾದ್ ಇದ್ದಾರೆ.
ನಿಕಟಪೂರ್ವ ಗವರ್ನರ್ ಸಮೀರ್ ಹರಿಯಾನಿ ಅವರಿಂದ (ಎಡದಿಂದ ಮೂರನೆಯವರು) ಬಿ.ಎಲ್.ನಾಗೇಂದ್ರ ಪ್ರಸಾದ್ ಅಧಿಕಾರ ಸ್ವೀಕರಿಸಿದರು. ಸಂಸದೆ ಸುಮಲತಾ ಅಂಬರೀಷ್, ರೂಪಾ ಹರಿಯಾನಿ, ಮೀರಾ ನಾಗೇಂದ್ರ ಪ್ರಸಾದ್ ಇದ್ದಾರೆ.   

ಬೆಂಗಳೂರು: ರೋಟರಿ ಇಂಟರ್‌ ನ್ಯಾಷನಲ್ 3190ನೇ ಜಿಲ್ಲೆಯ ನೂತನ ಗವರ್ನರ್ ಬಿ.ಎಲ್.ನಾಗೇಂದ್ರ ಪ್ರಸಾದ್ ಭಾನುವಾರ ಅಧಿಕಾರ ಸ್ವೀಕರಿಸಿದರು.

ಬಳಿಕ ಮಾತನಾಡಿದ ಅವರು, 'ಪರಿಸರ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ 'ರೋಟರಿ ಅವನಿ' ಎಂಬ ವಿಶೇಷ ಕಾರ್ಯಕ್ರಮವನ್ನು ಸಂಸ್ಥೆ ಕೈಗೆತ್ತಿಕೊಂಡಿದೆ. ಜುಲೈ 1ರಿಂದ ರೋಟರಿ ಜಿಲ್ಲಾ ಘಟಕವು ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಿದೆ. ಅಗತ್ಯ ಇರುವವರಿಗೆ ಮಾಸ್ಕ್ ಹಾಗೂ ದಿನಸಿ ವಿತರಣೆ, ರೈಲ್ವೆ ಜಾಗದಲ್ಲಿ ಗಿಡ ನೆಡಲು ರೈಲ್ವೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕೋವಿಡ್ ನಿಯಂತ್ರಣ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಸದಸ್ಯರನ್ನು ಒಗ್ಗೂಡಿಸಲು ಮೊಬೈಲ್ ಆ್ಯಪ್ ಹಾಗೂ ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ' ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT