ADVERTISEMENT

ಇನ್ನೂ 15 ದಿನ ಲಾಕ್‌ಡೌನ್‌ ವಿಸ್ತರಣೆಗೆ ಗೋವಾ ಆಗ್ರಹ

ಪಿಟಿಐ
Published 29 ಮೇ 2020, 12:45 IST
Last Updated 29 ಮೇ 2020, 12:45 IST
   

ಪಣಜಿ: ದೇಶದಾದ್ಯಂತ ಜೂ.15 ರತನಕ ಲಾಕ್‌ಡೌನ್‌ ಅನ್ನು ವಿಸ್ತರಿಸಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಒತ್ತಾಯಿಸಿದ್ದಾರೆ.

ಶುಕ್ರವಾರ ಗೃಹ ಸಚಿವ ಅಮಿತ್‌ ಶಾ ಜೊತೆ ಫೋನ್‌ ಕರೆ ಮೂಲಕ ಮಾತನಾಡಿದ ಅವರು, ಕೋವಿಡ್‌–19ನಿಂದಾಗಿ ದೇಶದಲ್ಲಿ ಸೃಷ್ಟಿಯಾಗಿರುವ ಸಂಕಷ್ಟಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇದೇ ತಿಂಗಳ 31ರಂದು ಅಂತ್ಯಗೊಳ್ಳಲಿರುವ ಲಾಕ್‌ಡೌನ್‌ ಅನ್ನು ಇನ್ನೂ 15 ದಿನ ವಿಸ್ತರಿಸಬೇಕು ಎಂದು ಕೋರಿದ್ದಾರೆ. ಆದರೆ ನಿಯಮಗಳನ್ನು ಸಡಿಲಗೊಳಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

‘ಸಾಮಾಜಿಕ ಅಂತರ, ಶೇ. 50 ರಷ್ಟು ಸಿಬ್ಬಂದಿ ಸೇರಿದಂತೆ ಕೆಲವೊಂದು ಷರತ್ತುಗಳೊಂದಿಗೆ ಜಿಮ್‌, ಮಾಲ್‌ ಮತ್ತು ಹೋಟೆಲ್‌ತೆರಯಲು ಅವಕಾಶ ನೀಡಬೇಕು. ನಾವು ಕೇಂದ್ರದಿಂದ ಲಾಕ್‌ಡೌನ್ ಬಗೆಗಿನ‌ ಹೊಸ ಮಾರ್ಗಸೂಚಿಗಾಗಿ ಕಾಯುತ್ತಿದ್ದೇವೆ. ಅವುಗಳ ಆಧಾರದ ಮೇಲೆ ಲಾಕ್‌ಡೌನ್‌ ನಿಯಮಗಳನ್ನು ಸಡಿಲಗೊಳಿಸಲಿದ್ದೇವೆ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.