ADVERTISEMENT

12ನೇ ತರಗತಿ ಪಠ್ಯದಲ್ಲಿ ಸಂವಿಧಾನದ ವಿಧಿ 370 ರದ್ದತಿ ಅಂಶ ಸೇರ್ಪಡೆ

ಪಿಟಿಐ
Published 21 ಜುಲೈ 2020, 10:36 IST
Last Updated 21 ಜುಲೈ 2020, 10:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿಯು (ಎನ್‍ಸಿಇಆರ್‌ಟಿ) 12ನೇ ತರಗತಿಯ ರಾಜ್ಯಶಾಸ್ತ್ರ ವಿಷಯದ ಪಠ್ಯವನ್ನು ಪರಿಷ್ಕರಿಸಿದೆ. ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ರಾಜಕಾರಣ ಕುರಿತ ಅಂಶವನ್ನು ಕೈಬಿಟ್ಟು, ವಿಶೇಷ ಸ್ಥಾನಮಾನ ರದ್ದು ಮಾಡಿದ್ದರ ಕುರಿತ ಅಂಶವನ್ನು ಸೇರಿಸಿದೆ.

2020-21ನೇ ಶೈಕ್ಷಣಿಕ ಸಾಲಿಗಾಗಿ ‘ಸ್ವಾತಂತ್ರ್ಯಾನಂತರದ ಭಾರತದ ರಾಜಕಾರಣ’ ಕುರಿತ ಪಠ‍್ಯದಲ್ಲಿ ಈ ಬದಲಾವಣೆ ತರಲಾಗಿದೆ. ‘ಪ್ರತ್ಯೇಕತಾವಾದ ಮತ್ತು ಅದರ ಹಿಂದೆ’ ಶೀರ್ಷಿಕೆಯ ಪಠ‍್ಯದಿಂದ ಕೆಲ ಅಂಶ ಕೈಬಿಡಲಾಗಿದೆ. ‘ಪ್ರಾದೇಶಿಕ ನಿರೀಕ್ಷೆಗಳು’ ಶೀರ್ಷಿಕೆಯ ಭಾಗದಲ್ಲಿ ವಿಶೇಷ ಸ್ಥಾನಮಾನ ರದ್ದತಿ ವಿಷಯ ಸೇರ್ಪಡೆಯಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನುಕಳೆದ ವರ್ಷ ಆಗಸ್ಟ್ 5ರಂದು ಕೇಂದ್ರ ಸರ್ಕಾರರದ್ದುಪಡಿಸಿದ್ದು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‍ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳ ಸ್ಥಾಪನೆಯನ್ನು ಘೋಷಿಸಿತ್ತು.

ADVERTISEMENT

ಪರಿಷ್ಕೃತ ಪಠ‍್ಯಕ್ರಮದಲ್ಲಿ 2002ರ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಉಲ್ಲೇಖವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.