ADVERTISEMENT

ಎಫ್‌ಎಟಿಎಫ್‌ಗೆ ಪಾಕ್‌ ನಿಯೋಗ

ಪಿಟಿಐ
Published 14 ಅಕ್ಟೋಬರ್ 2019, 20:15 IST
Last Updated 14 ಅಕ್ಟೋಬರ್ 2019, 20:15 IST
   

ಇಸ್ಲಾಮಾಬಾದ್‌: ಇರಾನ್‌ ಮತ್ತು ಉತ್ತರ ಕೊರಿಯಾ ನಂತರ ಹಣಕಾಸು ಕ್ರಿಯಾ ಕಾರ್ಯಪಡೆಯ (ಎಫ್‌ಎಟಿಎಫ್‌) ಕಪ್ಪುಪಟ್ಟಿಯಲ್ಲಿ ಪಾಕಿಸ್ತಾನ ಸ್ಥಾನ ಪಡೆಯುವ ಸಾಧ್ಯತೆ ಇದ್ದು, ಇದರಿಂದ ಪಾರಾಗುವ ವಿಶ್ವಾಸವನ್ನು ಪಾಕ್‌ ವ್ಯಕ್ತಪಡಿಸಿದೆ.

‘ಹಣಕಾಸು ವ್ಯವಹಾರಗಳ ಸಚಿವ ಹಮ್ಮದ್‌ ಅಝರ್‌ ನೇತೃತ್ವದ ಪಾಕಿಸ್ತಾನದ ನಿಯೋಗವು ಪ್ಯಾರಿಸ್‌ನಲ್ಲಿರುವ ‘ಎಫ್‌ಎಟಿಎಫ್‌’ ಕಚೇರಿಗೆ ಭೇಟಿ ನೀಡಲಿದೆ. ಉಗ್ರರಿಗೆ ಹಣಕಾಸು ಹರಿವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಕ್‌ ಕೈಗೊಂಡಿರುವ ಕ್ರಮಗಳನ್ನು ಅದು ವಿವರಿಸಲಿದೆ ಎಂದು ಡಾನ್‌ ಪತ್ರಿಕೆ ಸೋಮವಾರ ವರದಿ ಮಾಡಿದೆ.

ಪಾಕ್‌ನ ಕ್ರಮಗಳ ಕುರಿತು ಅಕ್ಟೋಬರ್‌ 13ರಿಂದ 16ರವರೆಗೆ ಎಫ್‌ಎಟಿಎಫ್‌ ಮಾಹಿತಿ ಪಡೆಯಲಿದ್ದು, ಪರಿಶೀಲನೆ ನಂತರ ಅದು ಪಾಕ್‌ ಅನ್ನು ಬೂದು ಪಟ್ಟಿಯಲ್ಲಿಯೇ ಮುಂದುವರಿಸಬಹುದು ಅಥವಾ ಕಪ್ಪು ಪಟ್ಟಿಗೆ ಸೇರಿಸಬಹುದು ಎಂದು ‘ಡಾನ್‌’ ಹೇಳಿದೆ.

ADVERTISEMENT

ಏಷ್ಯಾ ಫೆಸಿಫಿಕ್‌ ಒಕ್ಕೂಟ (ಎಪಿಜಿ) ಉಗ್ರರಿಗೆ ನೆರವು ನೀಡಿದ ಆರೋಪವನ್ನು ಪಾಕ್ ಮೇಲೆ ಇದೇ ತಿಂಗಳ ಆರಂಭದಲ್ಲಿ ಹೊರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.