ADVERTISEMENT

ಮುಂದಿನ ಐದು ದಿನಗಳಲ್ಲಿ ಗುಜರಾತ್‌ನಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಪಿಟಿಐ
Published 14 ಜೂನ್ 2020, 11:55 IST
Last Updated 14 ಜೂನ್ 2020, 11:55 IST
ಅಹಮದಾಬಾದ್‌ನಲ್ಲಿ ಭಾನುವಾರ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ತುಂಬಿದೆ. ಇಂಥ ನೀರು ತುಂಬಿದ ರಸ್ತೆಗಳನ್ನು ದಾಟುತ್ತಿರುವ ಜನ    – ಪಿಟಿಐ ಚಿತ್ರ 
ಅಹಮದಾಬಾದ್‌ನಲ್ಲಿ ಭಾನುವಾರ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ತುಂಬಿದೆ. ಇಂಥ ನೀರು ತುಂಬಿದ ರಸ್ತೆಗಳನ್ನು ದಾಟುತ್ತಿರುವ ಜನ    – ಪಿಟಿಐ ಚಿತ್ರ    

ಅಹಮದಾಬಾದ್‌: ‘ನೈರುತ್ಯ ಮುಂಗಾರು ಗುಜರಾತ್‌ ರಾಜ್ಯವನ್ನು ಪ್ರವೇಶಿಸಿದ್ದು,ಮುಂದಿನ ಐದು ದಿನಗಳಲ್ಲಿ ರಾಜ್ಯದ ದಕ್ಷಿಣ ಭಾಗದಲ್ಲಿ ಭಾರಿ ಮಳೆಯಾಗಲಿದೆ’ ಎಂದು ಹವಾಮಾನ ಇಲಾಖೆ ಭಾನುವಾರ ಹೇಳಿದೆ.

ಜತೆಗೆ, ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದ ಕೆಲವು ಭಾಗಗಳಲ್ಲೂ ಉತ್ತಮ ಮಳೆಯಾಗಲಿದೆ ಎಂದೂ ಇಲಾಖೆ ಹೇಳಿದೆ.

‘ಅಹಮದಾಬಾದ್‌ನ ಕೆಲವು ಭಾಗಗಳು, ಗಾಂಧಿನಗರ, ವಲಸಾಡ್‌ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ದಾದ್ರ ಮತ್ತು ನಗರ್‌ ಹವೇಲಿಯಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ. ಗುಜರಾತ್‌ನಉತ್ತರ ಭಾಗದ ಕೆಲವು ಪ್ರದೇಶಗಳಲ್ಲೂ ಮಳೆ ಆಗಲಿದೆ’ ಎಂದು ಇಲಾಖೆ ತಿಳಿಸಿದೆ.

ADVERTISEMENT

‘ಕೇಂದ್ರ ಗುಜರಾತ್‌ ಮತ್ತು ಸೌರಾಷ್ಟ್ರ–ಕಚ್‌ ಪ್ರದೇಶದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ’ ಎಂದು ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.