ADVERTISEMENT

ಹೆತ್ತವರಿಗೆ ಸುಳ್ಳು ಹೇಳಿ ಕರ್ತವ್ಯಕ್ಕೆ ಹಾಜರಾದ ತೆಲಂಗಾಣದ ಕೊರೊನಾ ವಾರಿಯರ್

ಪಿಟಿಐ
Published 13 ಏಪ್ರಿಲ್ 2020, 11:22 IST
Last Updated 13 ಏಪ್ರಿಲ್ 2020, 11:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಖನೌದ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಯಲ್ಲಿ (ಕೆಜಿಎಂಯು)ಮೈಕ್ರೊಬಯಾಲಜಿ ವಿಭಾಗದಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿರುವ ತೆಲಂಗಾಣದ ರಾಮಕೃಷ್ಣ ಮನೆಯ ತೋಟದಲ್ಲಿಹೆತ್ತವರಿಗೆ ಸಹಾಯ ಮಾಡುತ್ತಿದ್ದಾಗ ಲಖನೌದಿಂದ ಫೋನ್ ಬಂತು. ಕರೆ ಮಾಡಿದ್ದು ಮೈಕ್ರೊಬಯಾಲಜಿ ವಿಭಾಗ ಮುಖ್ಯಸ್ಥೆ ಅಮಿತಾಜೈನ್.ಕೊರೊನಾ ವ್ಯಾಪಿಸುತ್ತಿರುವ ಈ ಹೊತ್ತಲ್ಲಿ ಕೊರೊನಾ ಸೋಂಕಿತರ ಮಾದರಿಯನ್ನು ಪರೀಕ್ಷಿಸಲು ಸಹಾಯ ಬೇಕು ಎಂದು ಜೈನ್ ಕರೆ ಮಾಡಿದ್ದರು.

ತಕ್ಷಣವೇ ರಾಮಕೃಷ್ಣ ತಾನಿರುವ ಖಮ್ಮಂ ಜಿಲ್ಲೆಯಿಂದ ಹೊರಡಲು ಸಿದ್ಧರಾದರು. ತಕ್ಷಣವೇ ಬ್ಯಾಗ್ ಪ್ಯಾಕ್ ಮಾಡಿ ಹೆತ್ತವರಲ್ಲಿ ಸುಳ್ಳು ಹೇಳಿ ಲಖನೌಗೆ ಹೊರಟರು.

ಹೈದರಾಬಾದ್‌ನಲ್ಲಿ ಕಲಿಯುತ್ತಿರುವ ನನ್ನೂರಿನ ಗೆಳೆಯನ ಮನೆಗೆ ಹೋಗುತ್ತಿದ್ದೇನೆ ಎಂದು ಅಪ್ಪ ಅಮ್ಮನಲ್ಲಿ ಸುಳ್ಳು ಹೇಳಿದ್ದೆ. ಆದರೆ ಈಗ ನಾನು ಲಖನೌ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂಬುದುಈಗ ಅವರಿಗೆ ಗೊತ್ತಾಗಿದೆ ಅಂತಾರೆ 29ರ ಹರೆಯದ ರಾಮಕೃಷ್ಣ.

ADVERTISEMENT

ಮಾರ್ಚ್ 21ರಂದು ಫೋನ್ ಕರೆ ಬಂದ ತಕ್ಷಣವೇ ನಾನು ಹೊರಡುಲು ಸಿದ್ಧನಾದೆ.ಹೈದರಾಬಾದ್‌ನಲ್ಲಿರುವ ನನ್ನ ಗೆಳೆಯನ ಮನೆಗೆ ಹೋಗಿ ಥೀಸಿಸ್ ಬರೆಯಲಿದೆ ಎಂದು ಹೇಳಿದೆ. ಅವರು ಅಷ್ಟೊಂದು ದೂರ ಹೋಗುವುದಕ್ಕೆ ಮೊದಲು ಒಪ್ಪದೇ ಇದ್ದರೂ ಕೊನೆಗೆ ಒಪ್ಪಿಕೊಂಡರು.ಮಾರ್ಚ್ 22ರಂದು ನಾನು ಹೈದರಾಬಾದ್‌ಗೆ ತಲುಪಿದೆ. ಅಂದು ಜನತಾ ಕರ್ಫ್ಯೂ ಇದ್ದ ಕಾರಣ ಎಲ್ಲ ರಸ್ತೆಗಳು ಬಂದ್ ಆಗಿದ್ದವು. ಹೀಗಿದ್ದರೂ ಮಾರ್ಚ್ 23ರಂದು ಮುಂಜಾನೆ ವಿಮಾನ ನಿಲ್ದಾಣಕ್ಕೆ ಹೊರಟೆ. ಅಲ್ಲಿಗೆ ತಲುಪುವುದು ಸುಲಭದ ಮಾತೇನಲ್ಲ.ಪೊಲೀಸರು ತಡೆದು ನಿಲ್ಲಿಸಿದರು. ನಾನು ಲಖನೌ‌ಗೆ ಹೋಗುತ್ತಿರುವ ಉದ್ದೇಶವನ್ನು ಅವರಿಗೆ ತಿಳಿಸಿದೆ. ಅವರು ನನಗೆ ಸಹಾಯ ಮಾಡಿದರು. ನಾನು ಲಖನೌಗೆ ವಿಮಾನ ಹತ್ತಿ ಕೆಜಿಎಂಯು ತಂಡವನ್ನು ಸೇರಿಕೊಂಡೆ ಎಂದು ರಾಮಕೃಷ್ಣ ಹೇಳಿದ್ದಾರೆ.

ರಾಮಕೃಷ್ಣ ಅವರ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ ನಂತರ ದೇಶದ ಜನರು ಗುರುತಿಸುವಂತಾಯಿತು.

6 ತಿಂಗಳ ಹಿಂದೆಯೇ ಪ್ರಾಜೆಕ್ಟ್ ಮುಗಿಸಿ ಊರಿಗೆ ಬಂದಿದ್ದ ರಾಮಕೃಷ್ಣ ಥೀಸಿಸ್‌ ಬರೆಯುತ್ತಿದ್ದು ಜತೆಗೆಅಪ್ಪ ಅಮ್ಮನಿಗೆ ಕೃಷಿ ಕಾರ್ಯದಲ್ಲಿ ಸಹಾಯ ಮಾಡುತ್ತಿದ್ದರು,

ನಾನು ಲ್ಯಾಬ್‌ನಲ್ಲಿಸಹಾಯಕ್ಕಾಗಿ ನನ್ನ ವಿದ್ಯಾರ್ಥಿಗಳಿಗೆ ಕರೆ ಮಾಡಿದ್ದೆ. ಲಖನೌದಲ್ಲಿರುವ ಇಬ್ಬರು ವಿದ್ಯಾರ್ಥಿಗಳು ತಕ್ಷಣವೇ ಹೊರಟು ಬಂದಿದ್ದರು. ರಾಮಕೃಷ್ಣ ಮತ್ತು ಇನ್ನೊಬ್ಬ ವಿದ್ಯಾರ್ಥಿ ದೂರವಿದ್ದರೂ ಹೊರಟು ಬರುವುದಾಗಿ ಹೇಳಿದ್ದರು. ನಾನು ರಾಮಕೃಷ್ಣ ಅವರಿಗೆ ಫೋನ್ ಮಾಡಿದಾಗ, ಹೆತ್ತವರ ಮನವೊಲಿಸಲು ನನಗೆ ಒಂದು ಗಂಟೆ ಕಾಲಾವಕಾಶ ಕೊಡಿನಾನು ಬರುತ್ತೇನೆ ಎಂದಿದ್ದರು.

ರಿಸರ್ಚ್ ವಿದ್ಯಾರ್ಥಿಗಳು ಯುದ್ಧಭೂಮಿಯಲ್ಲಿ ಯೋಧರಂತೆ ಕೆಲಸ ಮಾಡುತ್ತಿದ್ದರೆ. ನಮ್ಮ ಈ ಯೋಧರು ಮಾಸ್ಕ್ ಹಾಕಿಕೊಳ್ಳುತ್ತಾರೆ ಎಂದು ಜೈನ್ ಹೇಳಿದ್ದಾರೆ. ಮೈಕ್ರೊಬಯಾಲಜಿಸ್ಟ್‌ಗಳನ್ನು ಅಭಿನಂದಿಸಿದ ಜೈನ್, ಈ ರೀತಿ ಲಕ್ಷದಷ್ಟುಯೋಧರು ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಅವರನ್ನು ಅಭಿನಂದಿಸಿ ಪ್ರೋತ್ಸಾಹಿಸಬೇಕು ಎಂದಿದ್ದಾರೆ.

ಅವರಿಗೆ ಸಂಬಳ ನೀಡಲಾಗುವುದು. ಆದರೆ ಅವರು ಇಲ್ಲಿಯವರೆಗೆ ಸಂಬಳ ಕೇಳಲಿಲ್ಲ. ತುಂಬಾ ನಿಷ್ಠೆಯಿಂದ ಅವರು ಕಾರ್ಯವೆಸಗುತ್ತಿದ್ದಾರೆ. ಕಳೆದ ಫೆಬ್ರುವರಿಯಿಂದಲೇ ಕೆಜಿಎಂಯುನಲ್ಲಿರುವ ವೈರಾಲಜಿ ಲ್ಯಾಬ್ ಕೋವಿಡ್ -19 ರೋಗ ಶಂಕಿತರ ಮಾದರಿಗಳನ್ನು ಪರೀಕ್ಷಿಸುತ್ತಿದೆ. ಇಲ್ಲಿನ ಲ್ಯಾಬ್ ಟೆಕ್ನೀಷಿಯನ್, ವೈರಾಲಜಿಸ್ಟ್, ವಿಜ್ಞಾನಿಗಳು, ತಜ್ಞರು ಎಲ್ಲರೂ ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ ಎಂದು ಜೈನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.