ADVERTISEMENT

ಹದಿನಾರು ವರ್ಷದ ಗ್ರೇಟಾ ಹೆಸರು ನೋಬೆಲ್‌ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ

ಏಜೆನ್ಸೀಸ್
Published 15 ಮಾರ್ಚ್ 2019, 4:56 IST
Last Updated 15 ಮಾರ್ಚ್ 2019, 4:56 IST
   

ಕೊಪೆನ್‌ ಹೆಗನ್‌:ತರಗತಿ ಬಹಿಷ್ಕರಿಸಿಪ್ಯಾರಿಸ್‌ನಲ್ಲಿ ಆಂದೋಲನ ನಡೆಸಿ ಗಮನ ಸೆಳೆದಿದ್ದ ಹದಿನಾರು ವರ್ಷದ ಪರಿಸರ ಹೋರಾಟಗಾರ್ತಿ ಗ್ರೇಟಾ ತಂಬರ್ಗ್‌ ಹೆಸರನ್ನು ನಾರ್ವೆಯ ಸಂಸತ್ತು ನೊಬೆಲ್‌ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.

ಜಾಗತಿಕತಾಪಮಾನ ಏರಿಕೆಯ ವಿರುದ್ಧ ವಿದ್ಯಾರ್ಥಿಗಳು ಬೀದಿಗಳಿದು ಹೋರಾಟ ನಡೆಸಲು ಜಾಗೃತಿ ಮೂಡಿಸುವ ಪ್ರಯತ್ನವನ್ನು ಗ್ರೇಟಾ ಆರಂಭಿಸಿದ್ದಾಳೆ. ‘ಈಕೆ ಆರಂಭಿಸಿರುವ ಈ ಆಂದೋಲನ ಶಾಂತಿ ಸ್ಥಾಪನೆಗೆ ಪ್ರಮುಖ ಕೊಡುಗೆ ನೀಡಲಿದೆ’ ಎಂದು ಇಲ್ಲಿನ ಸಮಾಜವಾದಿ ಎಡ ಪಕ್ಷದ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ತಂಬರ್ಗ್‌ ಮಾಡಿದ ಭಾಷಣಕ್ಕೆ ರಾಜಕೀಯ ನಾಯಕರು ಮತ್ತು ಪರಿಸರ ಹೋರಾಟಗಾರರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಸಿಡ್ನಿ, ಬ್ರುಸೆಲ್‌, ಬರ್ಲಿನ್‌, ಲಂಡನ್ನಿನ ಹಲವು ನಗರಗಳ ವಿದ್ಯಾರ್ಥಿಗಳು ಈಕೆಯಿಂದ ಪ್ರೇರಣೆ ಪಡೆದು ಜಾಗತಿಕ ತಾಪಮಾನದ ವಿರುದ್ಧ ಹೋರಾಡುತ್ತಿದ್ದಾರೆ.

ಹೆಣ್ಣುಮಕ್ಕಳ ಶಿಕ್ಷಣ ಹಕ್ಕು ಕುರಿತು ಧ್ವನಿ ಎತ್ತಿದ್ದ ಕಾರಣಕ್ಕೆ ತಾಲಿಬಾನಿ ಉಗ್ರರ ಗುಂಡೇಟಿಗೆ ತೀವ್ರ ಗಾಯಗೊಂಡಿದ್ದ ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆ ಮಲಾಲ ಯೂಸುಫ್‌ಜೈಗೆ 17ನೇ ವಯಸ್ಸಿನಲ್ಲಿ2014ರಲ್ಲಿ ಶಾಂತಿ ನೋಬೆಲ್‌ ಪ್ರಶಸ್ತಿ ಸಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.