ADVERTISEMENT

ಪಶ್ಚಿಮ ಬಂಗಾಳ: ಕೋವಿಡ್‌ ವಿಷಯ ಪಠ್ಯಕ್ರಮದಲ್ಲಿ ಸೇರಿಸಲು ಚಿಂತನೆ

ಪಿಟಿಐ
Published 30 ಜೂನ್ 2020, 7:35 IST
Last Updated 30 ಜೂನ್ 2020, 7:35 IST
ಕೊರೊನಾ ವೈರಸ್‌–ಪ್ರಾತಿನಿಧಿಕ ಚಿತ್ರ
ಕೊರೊನಾ ವೈರಸ್‌–ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ:ಪಶ್ಚಿಮ ಬಂಗಾಳ ಸರ್ಕಾರವು ಮುಂದಿನ ಶೈಕ್ಷಣಿಕ ಸಾಲಿನಿಂದಶಾಲಾ ಪಠ್ಯಕ್ರಮದಲ್ಲಿ ‘ಕೋವಿಡ್‌’ ಕುರಿತ ‍ಪಾಠವನ್ನು ಸೇರಿಸಲು ಚಿಂತಿಸಿದೆ. ಈ ಮೂಲಕಮಕ್ಕಳಲ್ಲಿ ಕೋವಿಡ್‌–19ರ ಬಗ್ಗೆ ಅರಿವು ಮೂಡಿಸಲು ಸರ್ಕಾರ ಮುಂದಾಗಿದೆ.

ಕೊರೊನಾ ವೈರಸ್‌ನ ಸ್ವರೂಪ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಕ್ಕಳಿಗೆ ಪಠ್ಯಕ್ರಮದ ಮೂಲಕ ಹೇಗೆ ಮಾಹಿತಿ ನೀಡುತ್ತಿರಾ ಎಂದುಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಪಾರ್ಥಾ ಚಟರ್ಜಿ ಅವರು ಇತ್ತೀಚೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಕೇಳಿದ್ದರು. ಅದರ ಬೆನ್ನಲ್ಲೆ ಶಿಕ್ಷಣ ಇಲಾಖೆ ಈ ಕುರಿತು ಯೋಜನೆ ರೂಪಿಸುತ್ತಿದೆ ಎಂದು ಪಠ್ಯಕ್ರಮ ರಚನಾ ಸಮಿತಿಯ ಅಧಿಕಾರಿಯೊಬ್ಬರು ಮಾಹಿತಿ ನೀಡದ್ದಾರೆ.

‘ಪಠ್ಯಕ್ರಮ ಸಮಿತಿಯ ಸದಸ್ಯರು ಮತ್ತು ತಜ್ಞರ ಜತೆ ಸೇರಿ ಈ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ.ಕೇವಲ ಶಿಕ್ಷಕರು, ಶಿಕ್ಷಣ ತಜ್ಞರು ಮಾತ್ರವಲ್ಲದೇ ವೈದ್ಯಯರು, ವೈರಾಲಜಿ ತಜ್ಞರು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರಿಂದಲೂ‌ಸಲಹೆಗಳನ್ನು ಪಡೆಯಲಿದ್ದೇವೆ’ ಎಂದು ಪಠ್ಯಕ್ರಮ ಸಮಿತಿಯ ಅಧ್ಯಕ್ಷ ಅವೀಕ್‌ ಮಜುಂದಾರ್‌ ತಿಳಿಸಿದ್ದಾರೆ.

ADVERTISEMENT

ಪ್ರಾಥಮಿಕ ಶಾಲಾ ಹಂತದಿಂದ ಪ್ರೌಢ ಶಾಲಾ ಹಂತದವರೆಗಿನ ತರಗತಿಗಳಿಗೆಪಠ್ಯಕ್ರಮದಲ್ಲಿ ಕೊರೊನಾ ವೈರಸ್‌ನ ಬಗೆಗಿನ ಅಧ್ಯಾಯವನ್ನು ಸೇರಿಸುವ ಬಗ್ಗೆ ಶಿಕ್ಷಣ ಇಲಾಖೆಯು ಚಿಂತನೆ ನಡೆಸುತ್ತಿದೆ. ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಸ್ವಚ್ಛತೆ, ಸುರಕ್ಷತಾ ಕ್ರಮಗಳ ಬಗ್ಗೆ ಹಾಗೂ ಪ್ರೌಢಶಾಲಾ ಹಂತದ ಮಕ್ಕಳಿಗೆ ಕೋವಿಡ್ ಸಾಂಕ್ರಾಮಿಕ ರೋಗ ಯಾವ ರೀತಿ ಹರಡುತ್ತದೆ ಎಂಬುದರ ಬಗ್ಗೆ ಪಠ್ಯದ ಮೂಲಕ ತಿಳಿಸುವ ಉದ್ದೇಶ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.