ADVERTISEMENT

ಅಜಯ್ ಪಂಡಿತ್ ನಿರ್ದೇಶನದ ಕಿರುಚಿತ್ರಕ್ಕೆ ಎರಡನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 20:47 IST
Last Updated 6 ಜೂನ್ 2020, 20:47 IST
ಅಜಯ್ ಪಂಡಿತ್
ಅಜಯ್ ಪಂಡಿತ್   

ಸಾಗರ: ಲಾಕ್‌ಡೌನ್ ಸಂದರ್ಭದಲ್ಲಿ ಫಿಲ್ಮ್ ಕಂಪ್ಯಾನಿಯನ್ ಸೌತ್ ಸಂಸ್ಥೆ ನಡೆಸಿದ ಕಿರುಚಿತ್ರ ಸ್ಪರ್ಧೆಯಲ್ಲಿ ಇಲ್ಲಿಯ ಅಜಯ್ ಪಂಡಿತ್ ನಿರ್ದೇಶಿಸಿದ ‘ಒನ್ ರೂಂ, ಒನ್ ಫೋನ್, ಒನ್ ಫಿಲ್ಮ್’ ಚಿತ್ರಕ್ಕೆ ಎರಡನೇ ಸ್ಥಾನ ಲಭ್ಯವಾಗಿದೆ.

ಕನ್ನಡ, ಮಲಯಾಳಂ, ತಮಿಳು, ತೆಲುಗು ಸೇರಿ ವಿವಿಧ ಭಾಷೆಗಳ 500 ಚಿತ್ರಗಳು ಸ್ಪರ್ಧೆಯಲ್ಲಿದ್ದವು.

ಲಾಕ್‌ಡೌನ್ ವೇಳೆಯಲ್ಲಿ ಮನೆಯಿಂದ ಹೊರಕ್ಕೆ ಹೋಗಲಾರದ ಮಗುವಿನ ತಲ್ಲಣಗಳನ್ನು ಕಿರುಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ. https://youtu.be/BCwMioAq6ps ಲಿಂಕ್‌ ಮೂಲಕ ಈ ಚಿತ್ರ ವೀಕ್ಷಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.