ADVERTISEMENT

ಚನ್ನಗಿರಿ ಅಡಿಕೆ ಗೋದಾಮುಗಳ ಮೇಲೆ ದಾಳಿ: ₹ 31 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 28 ಮೇ 2020, 20:52 IST
Last Updated 28 ಮೇ 2020, 20:52 IST
ಚನ್ನಗಿರಿಯಲ್ಲಿ ಪತ್ತೆಯಾದ ಅಡಿಕೆ ದಾಸ್ತಾನು
ಚನ್ನಗಿರಿಯಲ್ಲಿ ಪತ್ತೆಯಾದ ಅಡಿಕೆ ದಾಸ್ತಾನು   

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಚನ್ನಗಿರಿ ತಾಲೂಕಿನ ಐದು ಗೋದಾಮುಗಳ ಮೇಲೆ ದಾಳಿ ಮಾಡಿ ಅಕ್ರಮವಾಗಿ ಸಂಗ್ರಹಿಸಿದ್ದ ₹ 3.1 ಕೋಟಿ ಮೌಲ್ಯದ ಅಡಿಕೆಯನ್ನು ಪತ್ತೆ ಹಚ್ಚಿ ₹ 31 ಲಕ್ಷ ದಂಡ ಹಾಕಿದ್ದಾರೆ.

ಕೋವಿಡ್‌ ಲಾಕ್‌ಡೌನ್‌ ವೇಳೆಯಲ್ಲಿ ಕೆಲವರು ಜಿಎಸ್‌ಟಿ ನೋಂದಣಿ ಪಡೆಯದೆ ಅಕ್ರಮವಾಗಿ ಅಡಿಕೆ ಅಕ್ರಮ ದಾಸ್ತಾನು ಮತ್ತು ಸಾ್ಗಣೆ ವ್ಯವಹಾರದಲ್ಲಿ ತೊಡಗಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ದಾಳಿ ಡೆಸಲಾಗಿದೆ.

ಚನ್ನಗಿರಿ ತಾಲೂಕಿನ ನಲ್ಲೂರು ಮತ್ತು ಕೆರೆಬಿಳಚಿಯಲ್ಲಿ ಗೋದಾಮುಗಳ ಮೇಲೆ ನಡೆದ ದಾಳಿಯಲ್ಲಿ ಬೆಂಗಳೂರು ದಕ್ಷಿಣ ವಲಯ ಮತ್ತು ಬಳ್ಳಾರಿ ಜಾರಿ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು.

ADVERTISEMENT

ಈ ಸಮಯದಲ್ಲಿ ₹ 3.1 ಕೋಟಿ ಮೌಲ್ಯದ ಅಕ್ರಮ ಅಡಿಕೆ ದಾಸ್ತಾನು ಪತ್ತೆಯಾಯಿತು. ಅಡಿಕೆ ಮಾಲೀಕರ ಮೇಲೆ ₹ 31 ಲಕ್ಷ ತೆರಿಗೆ ಮತ್ತು ದಂಡ ವಿಧಿಸಲಾಯಿತು. ₹ 12 ಲಕ್ಷವನ್ನು ಸ್ಥಳದಲ್ಲೇ ವಸೂಲು ಮಾಡಲಾಯಿತು ಎಂದು ವಾಣಿಜ್ಯ ಇಲಾಖೆ ಆಯುಕ್ತರಾದ ಶ್ರೀಕರ್‌ತಿಳಿಸಿದ್ದಾರೆ.

ಈ ವ್ಯವಹಾರವನ್ನು ಅನಧಿಕೃತವಾಗಿ ನಡೆಸಿರುವುದರಿಂದ ಎಪಿಎಂಸಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಅಡಿಕೆ ಅನಧಿಕೃತ ದಾಸ್ತಾನು ವಿರುದ್ಧ ಅವರೂ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಕರಾವಳಿ, ಮಲೆನಾಡು, ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಜಿಎಸ್‌ಟಿ ನೋಂದಣಿ ಇಲ್ಲದೆ ಉತ್ತರ ಭಾರತದ ರಾಜ್ಯಗಳಿಗೆ ಕಳಿಸಲಾಗುತ್ತದೆ ಎಂದೂ ವಾಣಿಜ್ಯ ಇಲಾಖೆ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.