ADVERTISEMENT

ಬಂಡೀಪುರ| ಅಕ್ಷಯ್‌ ಕುಮಾರ್‌ ಜೊತೆ ಬೇರ್‌ ಗ್ರಿಲ್ಸ್‌ ಚಿತ್ರೀಕರಣ

ಬಂಡೀಪುರ: ಸೆರಾಯ್‌ ರೆಸಾರ್ಟ್‌ನಲ್ಲಿ ಬಾಲಿವುಡ್ ನಟ, ಇಂದು 4 ಗಂಟೆವರೆಗೆ ಚಿತ್ರೀಕರಣ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 20:00 IST
Last Updated 29 ಜನವರಿ 2020, 20:00 IST
ಅಕ್ಷಯ್‌ ಕುಮಾರ್‌, ಬೇರ್‌ ಗ್ರಿಲ್ಸ್‌, ರಜನಿಕಾಂತ್‌
ಅಕ್ಷಯ್‌ ಕುಮಾರ್‌, ಬೇರ್‌ ಗ್ರಿಲ್ಸ್‌, ರಜನಿಕಾಂತ್‌    

ಗುಂಡ್ಲುಪೇಟೆ: ನಟ ರಜನಿಕಾಂತ್‌ ಅವರ ಜೊತೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಂಗಳವಾರ ಚಿತ್ರೀಕರಣ ನಡೆಸಿದ್ದ ಡಿಸ್ಕವರಿ ಚಾನೆಲ್‌ನ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಖ್ಯಾತಿಯ ಬೇರ್‌ ಗ್ರಿಲ್ಸ್‌, ಗುರುವಾರದಂದು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರೊಂದಿಗೆ ಚಿತ್ರೀಕರಣ ಮಾಡಲಿದ್ದಾರೆ.

ಅಕ್ಷಯ್ ಕುಮಾರ್ ಬುಧವಾರವೇ ಬಂಡೀಪುರಕ್ಕೆ ಬಂದಿದ್ದು, ಸೆರಾಯ್‌ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ. ಟೈಗರ್‌ ರೋಡ್‌ ಸೇರಿದಂತೆ ಎರಡು– ಮೂರು ಕಡೆ ಚಿತ್ರೀಕರಣ ನಡೆಸಲಿದ್ದಾರೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ. ಬಾಲಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಹೊಸ ಕಾರ್ಯಕ್ರಮ: ಬೇರ್‌ ಗ್ರಿಲ್ಸ್‌ ಅವರ ನಿರೂಪಣೆಯಲ್ಲಿ ಡಿಸ್ಕವರಿ ಚಾನೆಲ್‌, ‘ಇನ್‌ಟು ದ ವೈಲ್ಡ್‌ ವಿತ್‌ ಬೇರ್‌ ಗ್ರಿಲ್ಸ್‌’ ಎಂಬ ಕಾರ್ಯಕ್ರಮ ರೂಪಿಸುತ್ತಿದ್ದು, ಇದೇ ಕಾರ್ಯಕ್ರಮಕ್ಕಾಗಿ ರಜನಿಕಾಂತ್‌ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಬೇರ್‌ ಗ್ರಿಲ್ಸ್‌, ಹೊಸ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ನಂತರ, ರಜನಿಕಾಂತ್‌ ನನ್ನೊಂದಿಗೆ ಜೊತೆಯಾಗಿದ್ದು,‘ಇನ್‌ಟು ದ ವೈಲ್ಡ್‌ ವಿತ್ ಬೇರ್‌ ಗ್ರಿಲ್ಸ್‌’ ಎಂಬ ಹೊಸ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ರಜನಿಕಾಂತ್‌ ಅವರೊಂದಿಗೆ ಬಂಡೀಪುರ ಅರಣ್ಯದಲ್ಲಿದ್ದ ಚಿತ್ರವನ್ನೂ ಹಾಕಿದ್ದಾರೆ.

ಗ್ರಿಲ್ಸ್‌ ಪ್ರತಿಕ್ರಿಯಿಸಿ ಮರುಟ್ವೀಟ್‌ ಮಾಡಿರುವ ರಜನಿ, ‘ಮರೆಯಲಾಗದ ಅನುಭವ ನೀಡಿರುವುದಕ್ಕೆ ಧನ್ಯವಾದಗಳು. ಲವ್‌ ಯೂ’ ಎಂದಿದ್ದಾರೆ.

ಡಿಸ್ಕವರಿ ಚಾನೆಲ್‌ ಕೂಡ ಟ್ವೀಟ್‌ ಮೂಲಕ ಹೊಸ ಕಾರ್ಯಕ್ರಮದ ರೂಪುರೇಷೆ ಬಗ್ಗೆ ವಿವರಿಸಿದೆ. ಬೇರ್‌ ಗ್ರಿಲ್ಸ್‌ ಅವರೊಂದಿಗಿನ ಕಾರ್ಯಕ್ರಮದಲ್ಲಿ ರಜನಿಕಾಂತ್‌ ಅವರು ನೀರಿನ ಸಂರಕ್ಷಣೆಯ ಬಗೆಗಿನ ಸಂದೇಶವನ್ನು ಪಸರಿಸಲಿದ್ದಾರೆ ಎಂದು ಹೇಳಿದೆ.

ಚಿತ್ರೀಕರಣಕ್ಕೆ ತೊಂದರೆ: ಗ್ರಿಲ್ಸ್‌, ರಜನಿ ಬೇಸರ

ಈ ಮಧ್ಯೆ, ಬುಧವಾರ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಲವು ಪೊಲೀಸ್‌ ಸಿಬ್ಬಂದಿ ಬೇರ್‌ ಗ್ರಿಲ್ಸ್‌ ಹಾಗೂ ರಜನಿಕಾಂತ್‌ ಅವರಿಗೆ ತೊಂದರೆ ಕೊಟ್ಟಿದ್ದಾರೆ. ಇದರಿಂದ ಇಬ್ಬರಿಗೂ ಕಿರಿಕಿರಿಯಾಗಿದೆ. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಮುಂದೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಚಿತ್ರೀಕರಣ ಸ್ಥಳದಲ್ಲಿ ಪೊಲೀಸರ ಅಗತ್ಯವಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಯೂ ಕಡಿಮೆ ಸಂಖ್ಯೆಯಲ್ಲಿರಲಿ’ ಎಂದು ಇಬ್ಬರೂ ಹೇಳಿರುವುದಾಗಿ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.