ADVERTISEMENT

ಇಂದು ಅಂಬರೀಶ್‌ ಜನ್ಮದಿನ: ಹರಿಯಿತು ಅಭಿಮಾನದ ಹೊಳೆ  

​ಪ್ರಜಾವಾಣಿ ವಾರ್ತೆ
Published 29 ಮೇ 2020, 2:04 IST
Last Updated 29 ಮೇ 2020, 2:04 IST
ರೆಬೆಲ್‌ ಸ್ಟಾರ್‌ ಅಂಬರೀಶ್
ರೆಬೆಲ್‌ ಸ್ಟಾರ್‌ ಅಂಬರೀಶ್    

ಬೆಂಗಳೂರು: ಇಂದು (ಮೇ.29) ಕನ್ನಡ ಚಿತ್ರರಂಗದ ಮೇರುನಟ ಅಂಬರೀಶ್‌ ಅವರ 69ನೇ ಜನ್ಮದಿನ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳಿಂದ ಶುಭಾಶಯಗಳ ಹೊಳೆಯೇ ಹರಿಯುತ್ತಿದೆ.

ಅಂಬರೀಶ್‌ ಅವರ ಜನ್ಮದಿನ ಅವರ ಅಭಿಮಾನಿಗಳ ಪಾಲಿಗೆ ಸಂಭ್ರಮ, ಸಡಗರದ ಹಬ್ಬವೇ ಆಗಿರುತ್ತಿತ್ತು. ಹೀಗಾಗಿ ಒಂದು ದಿನ ಮುಂಚಿತವಾಗಿಯೇ ಅಂಬರೀಶ್‌ ನಿವಾಸದ ಎದುರು ಸೇರುತ್ತಿದ್ದ ಅಭಿಮಾನಿಗಳು ರಾತ್ರಿ 12 ಗಂಟೆ ಆಗುತ್ತಲೇ ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಪಡುತ್ತಿದ್ದರು. ಆದರೆ, ಅಂಬರೀಶ್‌ ಅಗಲಿಕೆಯ ನಂತರ ಈ ಪರಿಪಾಠ ನಿಂತಿದೆಯಾದರೂ, ಸಾಮಾಜಿಕ ತಾಣಗಳಲ್ಲಿ ಅವರ ಮೇಲಿನ ಅಭಿಮಾನದ ಅಭಿವ್ಯಕ್ತಿ ಎಂದಿನಂತೇ ಇದೆ.

ಜನ್ಮದಿನದ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಅಂಬರೀಶ್‌ ಪತ್ನಿ, ಮಂಡ್ಯ ಸಂಸದೆ ಸುಮಲತಾ, ’ನಿಮ್ಮ ನೆನಪೇ ನಿತ್ಯ ಜ್ಯೋತಿ, ನಿಮ್ಮ ಸ್ಮರಣೆಯೇ ಅಮರ ಪ್ರೀತಿ,’ ಎಂದು ನೆನಪಿಸಿಕೊಂಡಿದ್ದಾರೆ. 'ಅವರು ಇಂದು 68 ನೇ ವರ್ಷಕ್ಕೆ ಕಾಲಿಡುತ್ತಿದ್ದರು. ವಿಧಿ ಅವರು ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಅವರ ಹೃದಯ ವಿಶ್ವದಂತೆ. ಜೀವನದಲ್ಲಿ ಅವರೊಂದಿಗೆ ಕೆಲವು ಹೆಜ್ಜೆಗಳನ್ನು ಹಾಕಿದ್ದು ಹೆಮ್ಮೆ ಎನಿಸುತ್ತಿದೆ,’ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

ADVERTISEMENT

ಮಂಡ್ಯದವರೇ ಆದ ನಟ ನೀನಾಸಂ ಸತೀಶ್‌ ಅವರು ಅಂಬರೀಶ್‌ ಅವರಿಗಾಗಿ ಹಾಡೊಂದನ್ನು ಸಿದ್ಧಪಡಿಸಿದ್ದು, ಇಂದು ಬೆಳಗ್ಗೆ 9ಕ್ಕೆ ಅದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಾಗಿ ಟ್ವೀಟ್‌ ಮಾಡಿದ್ದಾರೆ.

ಮಂಡ್ಯದ ಗಂಡು ಖ್ಯಾತಿಯ ನಟ ಅಂಬರೀಶ್‌ ಅವರು 2018ರ ನ.24ರಂದು ನಿಧನರಾಗಿದ್ದರು.

ಇನ್ನಷ್ಟು...

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.