ADVERTISEMENT

ಲಾಕ್‌ಡೌನ್: ಮೊಬೈಲ್ ಬಿಡಿಭಾಗ ಸರಬರಾಜು ವ್ಯತ್ಯಯ ಗ್ರಾಹಕರ ಪರದಾಟ ಹೆಚ್ಚಳ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 10:11 IST
Last Updated 25 ಏಪ್ರಿಲ್ 2020, 10:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನಿರ್ಬಂಧಗಳು ಹೀಗೆ ಮುಂದುವರಿದರೆ ಮೇ ಅಂತ್ಯದ ವೇಳೆಗೆ ಮೊಬೈಲ್ ಹ್ಯಾಂಡ್‌ಸೆಟ್‌ಗಳು ಮತ್ತು ಬಿಡಿಭಾಗಗಳ ಕೊರತೆಯಿಂದಾಗಿದೇಶದಲ್ಲಿ 4 ಕೋಟಿ ಮೊಬೈಲ್ ಫೋನ್ ಬಳಕೆದಾರರು ಹ್ಯಾಂಡ್‌ಸೆಟ್‌ಗಳಿಲ್ಲದೆ ಕಾಲ ಕಳೆಯುವನಿರೀಕ್ಷೆ ಇದೆ ಎಂದು
ಅಂದಾಜಿಸಲಾಗಿದೆ.

ಪ್ರಸ್ತುತ ವಿಶ್ವದಾದ್ಯಂತ ಕೊರೊನಾ ಸೋಂಕು ಹರಡಿ ಎಲ್ಲೆಡೆ ಕೆಲವೆಡೆ ಲಾಕ್‌ಡೌನ್ ಜಾರಿಯಲ್ಲಿದೆ. ಪರಿಣಾಮ ಮೊಬೈಲ್ ಬಿಡಿಭಾಗಗಳಉತ್ಪಾದನಾ ಘಟಕಗಳು ಸ್ಥಗಿತಗೊಂಡಿವೆ.ಭಾರತದಲ್ಲೂ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಮೊಬೈಲ್ ಮಾರಾಟ ಕ್ಷೇತ್ರಕ್ಕೆ ಹೊಡೆತ ಬಿದ್ದಿದೆ. ಲಾಕ್‌ಡೌನ್ಕಾರಣ ಮೊಬೈಲ್‌‌ ಬಿಡಿಭಾಗಗಳ ಸರಬರಾಜು ಕೂಡಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪ್ರಸ್ತುತ, 2.5 ಕೋಟಿಗೂ ಹೆಚ್ಚು ಮೊಬೈಲ್ ಗ್ರಾಹಕರು ಮೊಬೈಲ್‌ಗಳಲ್ಲಿ ಸಮಸ್ಯೆ ಕಾಣಿಸಿಕೊಂಡು ಮೊಬೈಲ್ ಇಲ್ಲದೆ ಇರಬೇಕಾದ ಪರಿಸ್ಥಿತಿ ಬಂದಿದೆ ಎಂದು ಇಂಡಿಯಾ ಸೆಲ್ಲುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್(ಐಸಿಇಎ) ತಿಳಿಸಿದೆ.

ಲಾಕ್‌ಡೌನ್ ಐದನೆ ವಾರಕ್ಕೆ ಪ್ರವೇಶಿಸಿರುವ ಈ ಸಮಯದಲ್ಲಿ ಸರ್ಕಾರ ಅಗತ್ಯ ಸರಕು ಮತ್ತು ಸೇವೆಗಳ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದ್ದು,ಟೆಲಿಕಾಂ, ಇಂಟರ್ನೆಟ್, ಪ್ರಸಾರ ಮತ್ತು ಐಟಿ ಸೇವೆಗಳಿಗೂ ಅನುಮತಿ ನೀಡಿದೆ. ಆದರೆ, ಮೊಬೈಲ್ ಸಾಧನಗಳನ್ನು ಇದರಲ್ಲಿ ಸೇರಿಸಿಲ್ಲ.

ADVERTISEMENT

ಐಸಿಇಎ ಪ್ರಕಾರ ಪ್ರಮುಖ ಹ್ಯಾಂಡ್ ಸೆಟ್ ತಯಾರಿಕಾ ಕಂಪನಿಗಳಾದ ಆಪಲ್, ಫಾಕ್ಸ್‌ಕಾನ್, ಶಿಯಾಮಿ ಹೇಳುವಂತೆ ಪ್ರತಿ ತಿಂಗಳು ಅಂದಾಜು 2.5 ಕೋಟಿ ಮೊಬೈಲ್ ಸೆಟ್ ಮಾರಾಟವಾಗುತ್ತಿತ್ತು.ಪ್ರಸ್ತುತ 85 ಕೋಟಿ ಮಂದಿ ಮೊಬೈಲ್ ಬಳಸುತ್ತಿದ್ದಾರೆ ಎನ್ನಲಾಗಿದೆ.
ಕೊರೊನಾದಿಂದಾಗಿ ಹೊಸ ಮೊಬೈಲ್ ಹಾಗೂ ಬದಲಿ ಮೊಬೈಲ್ ಸೆಟ್ ಎಲ್ಲವೂ ಸೇರಿದಂತೆ ಮಾರಾಟದಲ್ಲಿ ಒಟ್ಟಾರೆ ಮಾಸಿಕ ಶೇ. 0.25 ರಷ್ಟು ಕುಸಿತ ಕಂಡಿದೆ. ಪ್ರಸ್ತುತ ದೇಶದಲ್ಲಿ 85 ಕೋಟಿ ಮೊಬೈಲ್ ಬಳಕೆದಾರರಲ್ಲಿ2.5 ಕೋಟಿ ಮಂದಿ ಮೊಬೈಲ್ ಬಿಡಿಭಾಗಗಳಿಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಐಸಿಐಎ ತಿಳಿಸಿದೆ.

ಮೊಬೈಲ್ ತಯಾರಿಕಾ ಕ್ಷೇತ್ರದಹಲವು ಪ್ರಮುಖರು ಮೊಬೈಲ್ ಹಾಗೂ ಅದರ ಬಿಡಿಭಾಗಗಳನ್ನು ಅಗತ್ಯ ಸೇವೆಗಳ ಪಟ್ಟಿಯಲ್ಲಿ ಸೇರಿಸಿ ಎಂದು ಕೇಳಿಕೊಂಡಿದ್ದಾರೆ. ಆದರೆ, ಸರ್ಕಾರ ಇದುವರೆಗೂ ಸೇರಿಸಿಲ್ಲ.ಹಲವು ಬಾರಿ ಸರ್ಕಾರಿ ಅಧಿಕಾರಿಗಳೂ ಸೇರಿದಂತೆ ಪ್ರಧಾನಿಯವರನ್ನೂಭೇಟಿ ಮಾಡಿ ಅಗತ್ಯಸೇವೆಗಳ ಅಡಿಯಲ್ಲಿ ಸೇರಿಸಿ ಎಂದು ಮನವಿ ಮಾಡಿದ್ದಾರೆ.

ಮೇ ಅಂತ್ಯಕ್ಕೂ ಮೊದಲು ಈ ಸಂಖ್ಯೆಗಳು ಸುಮಾರು 4 ಕೋಟಿಗೆ ತಲುಪುತ್ತದೆ ಎಂದು ನಾವು ಸರ್ಕಾರಕ್ಕೆ ಪತ್ರಬರೆದಿದ್ದೇವೆ. ಅಗತ್ಯ ಸೇವೆಗಳ ಅಡಿಯಲ್ಲಿಮೊಬೈಲ್ ಫೋನ್ಸೇರಿಸಬೇಕು. ಯಾಕೆಂದರೆ, ಆನ್‌‌ಲೈನ್ ಮೂಲಕ ಮೊಬೈಲ್, ಬಿಡಿಭಾಗಗಳ ಮಾರಾಟ ಕಷ್ಟ. ಆದ್ದರಿಂದ ಔಷಧ, ಗೃಹೋಪಯೋಗಿ ವಸ್ತುಗಳ ಜೊತೆಗೆ,ಅಗತ್ಯ ಸೇವೆಗಳ ಅಡಿಯಲ್ಲಿ ಮೊಬೈಲ್ ಫೋನ್ ಅನ್ನು ಸೇರಿಸಿದರೆ ಮೊಬೈಲ್ ಸೆಂಟರ್‌ಗಳು ಆರಂಭವಾಗಿ ಹೋಮ್ ಡೆಲಿವರಿಗೆ ಸುಲಭವಾಗುತ್ತದೆ ಎಂದು ಐಸಿಇಎ ಅಧ್ಯಕ್ಷ ಪಂಕಜ್ ಮೋಹಿಂದ್ರೋ ಹೇಳುತ್ತಾರೆ.

ಕೆಲ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಸರ್ಕಾರ ಹೊರತಂದಿರುವ ಆರೋಗ್ಯ ಸೇತು ಆ್ಯಪ್ ಕಡ್ಡಾಯಗೊಳಿಸಿದೆ. ಈ ಆ್ಯಪ್ ಕೊರೊನಾ ಸೋಂಕು ಪ್ರಕರಣಗಳ ಪತ್ತೆಹಚ್ಚುವುದಕ್ಕೆಸಹಾಯವಾಗಲೆಂದು ಹೊರತರಲಾಗಿದೆ. ಆದರೆ, ಇಲ್ಲಿ ಸ್ಮಾರ್ಟ್ ಫೋನ್‌‌ಗಳೇ ಇಲ್ಲದೆಇದು ಕಷ್ಟದ ಕೆಲಸವಾಗಿದೆ.

ಮೊಬೈಲ್ ಹಾಗೂ ಲ್ಯಾಪ್ ಟಾಪ್ ಮಾರಾಟ ಮತ್ತು ಸರ್ವೀಸ್‌‌ಗಳನ್ನು ಅಗತ್ಯ ಸೇವೆಗಳ ಪಟ್ಟಿಯಲ್ಲಿ ತರುವಂತೆ ಐಸಿಇಎ ಹಾಗೂ ಮಾರಾಟಗಾರರುಜಂಟಿಯಾಗಿ ಪ್ರಧಾನಮಂತ್ರಿ,ಕೇಂದ್ರ ಗೃಹ ಮಂತ್ರಿ, ಕೇಂದ್ರ ಮಾಹಿತಿಮತ್ತು ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೂ ಗೃಹ ಇಲಾಖೆಯಿಂದ ಯಾವುದೇ ಮಾಹಿತಿ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.