ADVERTISEMENT

‘ಕವಲುದಾರಿ’ ಅತ್ಯುತ್ತಮ ಕನ್ನಡ ಚಿತ್ರ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 18:37 IST
Last Updated 4 ಮಾರ್ಚ್ 2020, 18:37 IST
ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನು ಅಶ್ವಿನಿ ಪುನಿತ್‌ ರಾಜ್‌ಕುಮಾರ್ ಅವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಉಪಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ ನೀಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜಯರಾಮ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಸಿನಿಮಾ ನಿರ್ದೇಶಕ ಹೇಮಂತ್ ಎಂ.ರಾವ್ ಇದ್ದರು –ಪ್ರಜಾವಾಣಿ ಚಿತ್ರ
ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನು ಅಶ್ವಿನಿ ಪುನಿತ್‌ ರಾಜ್‌ಕುಮಾರ್ ಅವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಉಪಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ ನೀಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜಯರಾಮ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಸಿನಿಮಾ ನಿರ್ದೇಶಕ ಹೇಮಂತ್ ಎಂ.ರಾವ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: 12ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಗೆ ಅಶ್ವಿನಿ ಪುನಿತ್‌ ರಾಜ್‌ಕುಮಾರ್ ನಿರ್ಮಾಣದ ‘ಕವಲುದಾರಿ’ (ನಿರ್ದೇಶಕ:ಹೇಮಂತ್ ಮುರುಳಿರಾವ್) ಸಿನಿಮಾ ಭಾಜನವಾಗಿದೆ.

‘ಒಂದು ಶಿಕಾರಿಯ ಕಥೆ’(ನಿ:ಸಚಿನ್ ಶೆಟ್ಟಿ), ‘ರಂಗನಾಯಕಿ’(ನಿ:ದಯಾಳ್ ಪದ್ಮನಾಭನ್) ಸಿನಿಮಾಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಪಡೆದಿವೆ. ತೀರ್ಪುಗಾರರ ಮೆಚ್ಚುಗೆಯ ಪ್ರಶಸ್ತಿಗೆ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ (ನಿ: ಆರ್.ಮಧುಚಂದ್ರ) ಸಿನಿಮಾ ಆಯ್ಕೆಯಾಗಿದೆ.

ವರ್ಷದ ಅತ್ಯುತ್ತಮ ಜನಪ್ರಿಯ ಕನ್ನಡ ಚಲನಚಿತ್ರ ಪ್ರಶಸ್ತಿಗೆ ‘ಮುನಿರತ್ನ ಕುರುಕ್ಷೇತ್ರ’(ನಿ:ನಾಗಣ್ಣ)ಆಯ್ಕೆಯಾದರೆ, ‘ಬೆಲ್ ಬಾಟಂ’ (ನಿ:ಬಿ.ವಿ.ಜಯತೀರ್ಥ) ಮತ್ತು ‘ಯಜಮಾನ’(ನಿ:ವಿ.ಹರಿಕಷ್ಣ, ಪೊನ್ ಕುಮಾರನ್‌) ಕ್ರಮವಾಗಿ ಎರಡನೇ ಮತ್ತು ಮೂರನೇ ಅತ್ಯುತ್ತಮ ಜನಪ್ರಿಯ ಸಿನಿಮಾ ಪ್ರಶಸ್ತಿ ಪಡೆದವು.

ADVERTISEMENT

ಚಿತ್ರಭಾರತಿ ಅತ್ಯುತ್ತಮ ಭಾರತೀಯ ಸಿನಿಮಾ ಪ್ರಶಸ್ತಿಗೆ ‘ಪಂಗ್ರುನ್’(ನಿ:ಮಹೇಶ್‌ ವಾಮನ್ ಮಂಜ್ರೇಕರ್‌) ಭಾಜನವಾಗಿದೆ. ತೀರ್ಪುಗಾರರ ವಿಶೇಷ ಭಾರತೀಯ ಸಿನಿಮಾ ಪ್ರಶಸ್ತಿಗೆ ‘ಬಿರ್ಯಾನಿ(ನಿ:ಸಜಿನ್ ಬಾಬು) ಮತ್ತು ‘ಜ್ವಾಲ್ವಿ(ದಿ ಸೀಡ್)(ನಿ:ರಜನಿ ಬಸುಮತ್ರೆ)’ ಚಿತ್ರಗಳು ಆಯ್ಕೆಯಾಗಿವೆ.

ಚಲನಚಿತ್ರವು ಸಿನಿಮಾ ವಿಮರ್ಶಕರ ಅಂತರರಾಷ್ಟ್ರೀಯ ಒಕ್ಕೂಟ (ಎಫ್‌ಐಪಿಆರ್‌ಎಎಸ್‌ಸಿಐ) ನೀಡುವ ಅತ್ಯುತ್ತಮ ವಿಮರ್ಶಕ ಚಿತ್ರಕ್ಕೆ‘ದಿ ಡಾಗ್ ಅ್ಯಂಡ್ ಹಿಸ್ ಮ್ಯಾನ್’(ನಿ: ಸಿದ್ಧಾರ್ಥ ತ್ರಿಪಾಠಿ) ಆಯ್ಕೆಯಾಗಿದೆ.

‘ಹ್ಯಾಪಿ ಓಲ್ಡ್‌ ಇಯರ್ಸ್’ ಅತ್ಯುತ್ತಮ ಚಿತ್ರ
ಥಾಯ್ಲೆಂಡ್‌ನ ನವಾಪೋಲ್ ತಮ್ರೊಂಗ್ರಟ್ಟನರಿಟ್ ನಿರ್ಮಿಸಿ ನಿರ್ದೇಶಿಸಿದ ‘ಹ್ಯಾಪಿ ಓಲ್ಡ್ ಇಯರ್ಸ್’ ಸಿನಿಮಾ ಏಷ್ಯನ್ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ‘ಕೋವಿಡ್‌ 19’ ಭೀತಿ ಹಿನ್ನೆಲೆಯಲ್ಲಿ ಪ್ರಶಸ್ತಿ ಸ್ವೀಕಾರಕ್ಕೆ ಈ ಚಿತ್ರ ತಂಡ ಬರಲಿಲ್ಲ.

ಅಂತರರಾಷ್ಟ್ರೀಯ ತೀರ್ಪುಗಾರರ ಪ್ರಶಸ್ತಿಗೆ ‘ಪಿಂಗಾರ’(ನಿ: ಪ್ರೀತಂ ಆರ್. ಶೆಟ್ಟಿ) ಆಯ್ಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.