ADVERTISEMENT

ಆನ್‌ಲೈನ್‌ ಕಾರ್ಯಕ್ರಮ | ಎಸ್ಸೆಸ್ಸೆಲ್ಸಿ ‘ಯಶಸ್ಸಿನ ಯಾತ್ರೆಗೊಂದು ದಾರಿದೀಪ’

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 21:24 IST
Last Updated 8 ಜೂನ್ 2020, 21:24 IST
ಡಾ ಗುರುರಾಜ ಕರಜಗಿ
ಡಾ ಗುರುರಾಜ ಕರಜಗಿ   

ಬೆಂಗಳೂರು: ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಅವರು ‘ಪ್ರಜಾವಾಣಿ’ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಬುಧವಾರ ಬೆಳಿಗ್ಗೆ 11ರಿಂದ 12 ಗಂಟೆಯವರೆಗೆ ‘ಯಶಸ್ಸಿನ ಯಾತ್ರೆಗೊಂದು ದಾರಿದೀಪ’ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನಡೆಸಿಕೊಡಲಿದ್ದಾರೆ.

ಕೊರೊನಾ ಸೋಂಕಿನ ಕಾರಣಕ್ಕೆ ಸುದೀರ್ಘ ಅವಧಿಯಿಂದ ಮನೆಯಲ್ಲೇ ಇರುವ ವಿದ್ಯಾರ್ಥಿಗಳಿಗೆ ಇದೇ 25ರಿಂದ ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಒಂದಿಷ್ಟು ಅಳುಕು ಸಹಜ. ಸತತ ಓದಿನಲ್ಲಿ ತೊಡಗಿದವರಿಗೂ ಕೆಲವೊಂದು ಬಾರಿ ಓದಿದ್ದು ನೆನಪಲ್ಲೇ ಉಳಿದಿಲ್ಲ ಎಂಬ ಭಾವನೆ ಬರುವುದೂ ಉಂಟು. ಉಳಿದಿರುವ ಕೇವಲ 15 ದಿನಗಳಲ್ಲಿ ಯಾವ ರೀತಿಯಲ್ಲಿ ಅಂತಿಮ ಕ್ಷಣದಲ್ಲಿ ಓದಿಕೊಂಡರೆ ಪರೀಕ್ಷೆಯನ್ನು ನಿರಾತಂಕವಾಗಿ ಎದುರಿಸಬಹುದು ಎಂಬ ಗುಟ್ಟನ್ನು ಹೇಳಿಕೊಡಲಿದ್ದಾರೆ ಡಾ.ಕರಜಗಿ.

ನೋಂದಣಿ ಮಾಡಿಕೊಂಡವರಿಗಷ್ಟೇ ಪಾಠ ಕೇಳುವ ಅವಕಾಶ ಇದೆ. ನೋಂದಣಿಗೆ https://tinyurl.com/PV-event2 ಇಲ್ಲಿಗೆ ಕ್ಲಿಕ್‌ ಮಾಡಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.