ADVERTISEMENT

ದಕ್ಷಿಣ ಆಫ್ರಿಕಾ: ಆಗಸ್ಟ್‌ 15ರವರೆಗೆ ನಿರ್ಬಂಧ ವಿಸ್ತರಣೆ

ಪಿಟಿಐ
Published 13 ಜುಲೈ 2020, 10:21 IST
Last Updated 13 ಜುಲೈ 2020, 10:21 IST
ಸಿರಿಲ್ ರಾಮಾಫೊಸಾ
ಸಿರಿಲ್ ರಾಮಾಫೊಸಾ   

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಈಗಾಗಲೇ ಜಾರಿಯಲ್ಲಿರುವ ಹಲವು ನಿರ್ಬಂಧಗಳನ್ನು ಮತ್ತೆ ಮುಂದುವರಿಸಲಾಗಿದೆ.

‘ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿರುವುದನ್ನು ಆ.15 ರವರೆಗೆ ವಿಸ್ತರಿಸಲಾಗಿದೆ. ರಾತ್ರಿ 9ಗಂಟೆಯಿಂದ ಬೆಳಗಿನ ಜಾವ 4ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ.ಜತೆಗೆ, ಮದ್ಯ ಮಾರಾಟಕ್ಕೂ ಮತ್ತೆ ನಿಷೇಧ ಹೇರಲಾಗಿದೆ’ ಎಂದು ಅಧ್ಯಕ್ಷ ಸಿರಿಲ್ ರಾಮಾಫೊಸಾ ತಿಳಿಸಿದ್ದಾರೆ.

‘ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೆ 2.76 ಲಕ್ಷಕ್ಕೂ ಹೆಚ್ಚು ಜನರಲ್ಲಿ ಕೋವಿಡ್‌–19 ದೃಢಪಟ್ಟಿದ್ದು, 4,079 ಜನರು ಬಲಿಯಾಗಿದ್ದಾರೆ. ಈಗ ಪ್ರತಿನಿತ್ಯ ಸರಾಸರಿ 12,000 ಹೊಸ ಪ್ರಕರಣಗಳು ವರದಿಯಾಗುತ್ತಿದೆ. ಜನರು ನಿರ್ಲಕ್ಷ್ಯವಹಿಸುತ್ತಿರುವುದರಿಂದ ಪ್ರಕರಣಗಳು ಹೆಚ್ಚುತ್ತಿವೆ. ಕೋವಿಡ್‌–19 ಮಾರ್ಗಸೂಚಿಯನ್ನು ಅನೇಕರು ಪಾಲಿಸುತ್ತಿಲ್ಲ. ಮುಖಗವಸು ಧರಿಸದೆ, ಸಾಮಾಜಿಕ ಅಂತರವನ್ನು ಪಾಲಿಸದೆನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

‘ಇಂತಹ ಪರಿಸ್ಥಿತಿಯಲ್ಲೂ ಜನರು ಪಾರ್ಟಿಗಳನ್ನು ಆಯೋಜಿಸುತ್ತಿದ್ದಾರೆ. ಅಂತ್ಯಕ್ರಿಯೆಯಲ್ಲಿ ಕೇವಲ 50 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಆದರೆ ಅಲ್ಲಿ 1000ಕ್ಕೂ ಹೆಚ್ಚು ಜನರು ಇರುತ್ತಾರೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.