ADVERTISEMENT

ಮಂಗಳನ ಅಂಗಳದಲ್ಲಿ...

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2012, 19:30 IST
Last Updated 10 ನವೆಂಬರ್ 2012, 19:30 IST
ಮಂಗಳನ ಅಂಗಳದಲ್ಲಿ...
ಮಂಗಳನ ಅಂಗಳದಲ್ಲಿ...   

ಮಂಗಳ ಗ್ರಹವನ್ನು `ಕೆಂಪು ಗ್ರಹ~ ಎಂದು ಯಾಕೆ ಕರೆಯುತ್ತಾರೆ?
ರೋಮನ್ ಯುದ್ಧ ದೇವರ ಹೆಸರು `ಮಾರ್ಸ್‌~. ಅಲ್ಲದೆ, ಮಂಗಳ ಗ್ರಹದ ಮೇಲ್ಮೈನಲ್ಲಿ ಕಬ್ಬಿಣದ ಡೈಆಕ್ಸೈಡ್ ಇರುವುದರಿಂದ ಅದಕ್ಕೆ ಕೆಂಪು ಗ್ರಹ ಎಂದು ಕರೆಯುತ್ತಾರೆ.

ರೋಮನ್ ಕ್ಯಾಲೆಂಡರ್‌ನಲ್ಲಿ ಮಾರ್ಚ್ ಮೊದಲ ತಿಂಗಳಾಗಿತ್ತು. ಆಗ ವರ್ಷಕ್ಕೆ ರೋಮನ್ನರಿಗೆ ಹತ್ತೇ ತಿಂಗಳು. ರೋಮನ್ ಯುದ್ಧ ದೇವರಾದ ಮಾರ್ಸ್‌ ಹೆಸರಿನಿಂದಲೇ ಮಾರ್ಚ್ ಎಂಬುದು ಬಂದದ್ದು.

ಭೂಮಿಯಿಂದ ಅದು ಎಷ್ಟು ದೂರದಲ್ಲಿದೆ?
ಭೂಮಿಯಿಂದ ಅದು 7 ಕೋಟಿ 84 ಲಕ್ಷ ಕಿ.ಮೀ. ದೂರದಲ್ಲಿದೆ.
ಮಂಗಳ ಗ್ರಹದಲ್ಲಿ ಜೀವಿಗಳಿವೆ ಎಂಬುದನ್ನು ಮೊದಲು ಪತ್ತೆಮಾಡಿದ್ದು ಯಾರು?
ಮಂಗಳ ಗ್ರಹದ ಮೇಲ್ಮೈನಲ್ಲಿ ಕಾಲುವೆಗಳಿರುವುದನ್ನು ಕಂಡು ಅಲ್ಲಿನ ಜೀವಿಗಳೇ ಅವನ್ನು ನಿರ್ಮಿಸಿರಬೇಕು ಎಂದು ಇಟಲಿಯ ವಿಜ್ಞಾನಿ ಗಿಯೋವಾನಿ ಶಿಯಾಪೆರೆಲಿ ಊಹೆ ಮಾಡಿದರು.

ಮಂಗಳ ಗ್ರಹದಲ್ಲಿ ಮನುಷ್ಯರ ದೇಹತೂಕ ಯಾಕೆ ಕಡಿಮೆಯಾಗುತ್ತದೆ?
ಭೂಮಿಯ ಗುರುತ್ವಾಕರ್ಷಣೆಯ ಮೂರನೇ ಒಂದು ಭಾಗದಷ್ಟು ಮಾತ್ರ ಗುರುತ್ವಾಕರ್ಷಣೆ ಮಂಗಳ ಗ್ರಹದಲ್ಲಿರುತ್ತದೆ. ಹಾಗಾಗಿ ಸಹಜ ತೂಕದ ಮೂರನೇ ಒಂದು ಭಾಗದಷ್ಟು ಮಾತ್ರ ಅಲ್ಲಿ ಮನುಷ್ಯನ ತೂಕವಿರುತ್ತದೆ.

ಅಲ್ಲಿ ಚಂದ್ರಗಳೇನಾದರೂ ಇವೆಯೇ?

ಇವೆ. ಫೋಬೋಸ್ ಹಾಗೂ ಡೀಮೋಸ್ ಹೆಸರಿನ ಚಂದ್ರಗಳು ಅಲ್ಲಿವೆ. ಅಸಾಫ್ ಹಾಲ್ ಎಂಬುವರು 1877ರಲ್ಲಿ ಅವನ್ನು ಪತ್ತೆಮಾಡಿದರು. 

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.