
ಪ್ರಜಾವಾಣಿ ವಾರ್ತೆ
ಬೆಂಗಳೂರು: ಮಹಿಳಾ ಸಬಲೀಕರಣ ಹಾಗೂ ಸ್ಥಳೀಯ ಕುಶಲಕರ್ಮಿಗಳಿಗೆ ನೆರವು ಒದಗಿಸುವ ಉದ್ದೇಶದ ಎರಡು ದಿನಗಳ ‘ಕೆನರಾ ಉತ್ಸವ – 2026’ ಅನ್ನು ಕೆನರಾ ಬ್ಯಾಂಕ್ ನಗರದಲ್ಲಿ ಆಯೋಜಿಸಿದೆ.
ಇದು ಜಯಮಹಲ್ ರಸ್ತೆಯಲ್ಲಿನ ಜಯಮಹಲ್ ಸಭಾಂಗಣದಲ್ಲಿ ಭಾನುವಾರ ಮತ್ತು ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.
ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಹಾಗೂ ಸಮುದಾಯ ಅಭಿವೃದ್ಧಿಯ ಭಾಗವಾಗಿ ಮಹಿಳಾ ಉದ್ಯಮಿಗಳು ಮತ್ತು ಕುಶಲಕರ್ಮಿಗಳಿಗೆ ನೆರವು ಒದಗಿಸುವ ಕೆಲಸವನ್ನು ಕೆನರಾ ಬ್ಯಾಂಕ್ ಮಾಡುತ್ತಿದೆ, ಅವರ ಉತ್ಪನ್ನಗಳಿಗೆ ಈ ಉತ್ಸವದ ಮೂಲಕ ವೇದಿಕೆ ಒದಗಿಸುತ್ತಿದೆ ಎಂದು ಪ್ರಕಟಣೆ ಹೇಳಿದೆ.
ಸಾವಯವ ಆಹಾರ, ಮಡಿಕೆಗಳು, ಸಿಹಿ ತಿನಿಸುಗಳು, ಕರಕುಶಲ ಆಭರಣಗಳು, ಮೇಣದಬತ್ತಿಗಳು ಮತ್ತಿತರ ಉತ್ಪನ್ನಗಳು ಮೇಳದಲ್ಲಿ ಪ್ರದರ್ಶನಕ್ಕೆ ಇರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.