ADVERTISEMENT

ಇಂಡಸ್‌ ಇಂಡ್‌ ಬ್ಯಾಂಕ್‌ನ ಲೆಕ್ಕಪತ್ರ ಪರಿಶೀಲನೆ: ಐಸಿಎಐ

ಪಿಟಿಐ
Published 29 ಮೇ 2025, 16:35 IST
Last Updated 29 ಮೇ 2025, 16:35 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ : ಖಾಸಗಿ ವಲಯದ ಇಂಡಸ್‌ ಇಂಡ್‌ ಬ್ಯಾಂಕ್‌ನಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು (ಐಸಿಎಐ) ಪರಿಶೀಲನೆ ನಡೆಸಲು ಮುಂದಾಗಿದೆ.

2023–24 ಮತ್ತು 2024–25ನೇ ಆರ್ಥಿಕ ವರ್ಷದ ಬ್ಯಾಂಕ್‌ನ ಲೆಕ್ಕಪತ್ರಗಳನ್ನು  ಸಂಸ್ಥೆಯ ಹಣಕಾಸು ವರದಿ ಪರಿಶೀಲನಾ ಮಂಡಳಿಯು ಪರಿಶೀಲನೆ ನಡೆಸಲಿದೆ ಎಂದು ಐಸಿಎಐ ಅಧ್ಯಕ್ಷ ಚರಣ್‌ಜೋತ್ ಸಿಂಗ್ ನಂದಾ ಅವರು, ಪಿಟಿಐಗೆ ತಿಳಿಸಿದ್ದಾರೆ.

ಬ್ಯಾಂಕ್‌ನ ಲೆಕ್ಕಪತ್ರದಲ್ಲಿ ₹1,979 ಕೋಟಿ ವ್ಯತ್ಯಾಸ ಕಂಡು ಬಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.